
ತುರುವೇಕೆರೆ: ಇಲ್ಲಿಯ ದಬ್ಬೇಘಟ್ಟ ರಸ್ತೆಯ ವೃತ್ತದಲ್ಲಿ ಮತ್ತೊಂದು ಅಪಘಾತವಾಗಿದೆ, ಕೆಎಸ್ ಆರ್ ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಈರ್ವರಿಗೂ ತೀವ್ರ ಪೆಟ್ಟು ಬಿದ್ದು ಅವರು ಜೀವನ್ಮರಣದ ಹೋರಾಟ ನಡೆಸಿದ್ದಾರೆ.
ದಬ್ಬೇಘಟ್ಟ ರಸ್ತೆ ಮೊದಲೇ ಕಿರಿದಾಗಿದೆ, ಎರಡು ವಾಹನಗಳು ಓಡಾಡಲು ಅಸಾಧ್ಯವಾಗಿದೆ, ಅಲ್ಲದೇ ರಸ್ತೆಯ ಅಕ್ಕಪಕ್ಕ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿರುತ್ತಾರೆ, ರಸ್ತೆ ಕಾಣದಂತೆ ಫ್ಲೆಕ್ಸ್ ಗಳ ಹಾವಳಿ ಸಹ ಇದೆ, ಪಾದಚಾರಿಗಳೆಂದು ಇರುವ ರಸ್ತೆಯನ್ನು ಬೀದಿಬದಿ ವ್ಯಾಪಾರಿಗಳೇ ಆಕ್ರಮಿಸಿಕೊಂಡಿದ್ದಾರೆ, ದಾರಿಯ ಪಕ್ಕವೇ ದ್ವಿಚಕ್ರವಾಹನಗಳು, ಅಲ್ಲದೇ ಇನ್ನಿತರೇ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತಿದೆ. ಇದನ್ನು ತಹಬಂದಿಗೆ ತರಲು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ.
ಮೈಸೂರಿನಿಂದ ತಿಪಟೂರು ಕಡೆಗೆ ತೆರಳುತ್ತಿದ್ದ ಕೆಎಸ್ ಆರ್ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಿಪಟೂರು ತಾಲೂಕಿನ ಹುಚ್ಚಗೊಂಡನ ಹಳ್ಳಿಯ ನಿವಾಸಿಗಳಾದ ರವಿಕುಮಾರ ( 49) ಮತ್ತು ಮಂಜುನಾಥ್ ( 52) ಅವರಿಗೆ ಡಿಕ್ಕಿ ಸಂಭವಿಸಿದೆ. ಈರ್ವರ ಕಾಲೂ ಸಂಪೂರ್ಣ ಜಖಂಗೊಂಡಿದೆ, ದ್ವಿ ಚಕ್ರ ವಾಹನ ಬಸ್ ನ ಕೆಳಗಡೆ ತೂರಿ ಹೋದ ಪರಿಣಾಮ ಇವರಿಬ್ಬರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಬ್ಬೇಘಟ್ಟ ರಸ್ತೆ ವೃತ್ತದಲ್ಲಿ ಬಸ್, ದ್ವಿಚಕ್ರ ನಡುವೆ ಡಿಕ್ಕಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


