ಸಮೀರ್ ನ ಬೆಂಗಳೂರು ನಿವಾಸದಲ್ಲಿ ಶೋಧ

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧದ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಸಮೀರ್ ನ ಬೆಂಗಳೂರಿನ ನಿವಾಸದಲ್ಲಿ ಬೆಳ್ತಂಗಡಿ ಠಾಣೆ ಪೊಲೀಸರು ಗುರುವಾರ ಶೋಧ ನಡೆಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ಸೋಕೊ ಸಿಬ್ಬಂದಿ ಜೊತೆ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಬಾಡಿಗೆ ಮನೆಗೆ ಇಂದು ತೆರಳಿದ್ದು, ಅಲ್ಲಿ ಸಮೀರ್ ವಿಡಿಯೋ ತಯಾರಿಸುತ್ತಿದ್ದ ಸ್ಥಳದಲ್ಲೂ ಶೋಧ ನಡೆಸಿದ್ದಾರೆ. ಪೊಲೀಸರ ಆಗಮನದ ವೇಳೆ ಸಮೀರ್ ಮನೆಯಲ್ಲಿಯೇ ಇದ್ದು, ವಿಚಾರಣೆಗೆ ಸಹಕಾರ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. … Read more

ಜಗದೀಶ್ 5 ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಗುರುವಾರ ಆರೋಪಿ ಜಗದೀಶ್ ನನ್ನು 5 ದಿನ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿ ಜಗದೀಶ್ ನನ್ನು 5 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಕಳೆದ ಜುಲೈ 15ರಂದು ಬೆಂಗಳೂರಿನ ಭಾರತಿನಗರದಲ್ಲಿ ಬಿಕ್ಲು ಶಿವ ಕೊಲೆಯಾಗಿತ್ತು, ಈ ಕೊಲೆಯಲ್ಲಿ ಜಗದೀಶ್ ಎ.1 ಆರೋಪಿಯಾಗಿದ್ದ, ಕೊಲೆಯ ಬಳಿಕ ಚೆನ್ನೈ ಏರ್ ಪೋರ್ಟ್ ಮೂಲಕ ದುಬೈಗೆ ಎಸ್ಕೇಪ್ ಆಗಿದ್ದ.

ರಕ್ತಚಂದನ ಸಾಗಾಟ- ಮೂವರ ಬಂಧನ

ಬೆಂಗಳೂರು: ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶದ ನೆಲಮಲ್ಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಕದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲಕ ಕಟ್ಟಿಗೆಹಳ್ಳಿಗೆ ತರಲಾಗಿತ್ತು. ನಂತರ ರಕ್ತಚಂದನವನ್ನು ತುಂಡು ತುಂಡಾಗಿಸಿ ಹರಿಯಾಣಕ್ಕೆ ಕಳುಹಿಸಿಕೊಡಲಾಗಿತ್ತು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 25 ಲಕ್ಷ ಮೌಲ್ಯದ 1 ಕೆಜಿ ತೂಕದ ರಕ್ತಚಂದನ ವಶಪಡಿಸಿಕೊಳ್ಳಲಾಗಿದೆ ಹಾಗೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಏಜಾಜ್ ಷರೀಫ್, ಫಯಾಕ್ ಷರೀಫ್ ಹಾಗೂ ಸಾದಿಕ್ ಖಾನ್ … Read more

ಮತ್ತೆ ಮೂರು ದಿನ ಚೆನ್ನಯ್ಯ ಎಸ್ ಐಟಿ ಕಸ್ಟಡಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚೆನ್ನಯ್ಯನ ಎಸ್ ಐಟಿ ಕಸ್ಟಡಿ ಅಂತ್ಯಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅಧಿಕಾರಿಗಳು ಮತ್ತೆ ಮೂರು ದಿಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಸಮಾಧಿ ಶೋಧ ಪ್ರಕ್ರಿಯೆ ಬಳಿಕ ಎಸ್ ಐಟಿ ಚೆನ್ನಯ್ಯನನ್ನು ಬಂಧಿಸಿತ್ತು. ಅದಾದ ಬಳಿಕ ಹೆಚ್ಚಿನ ವಿಚಾರಣೆ ಅಗತ್ಯವಿರುರುವ ಹಿನ್ನಲೆಯಲ್ಲಿ ಆತನನ್ನು 12 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿತ್ತು. ಇದೀಗ ಕಸ್ಟಡಿ ಅವಧಿ ಪೂರ್ಣಗೊಂಡಿದ್ದು, ವಿಚಾರಣೆ ಇನ್ನೂ … Read more

ನಟಿ ರನ್ಯಾಗೆ 102 ಕೋಟಿ ರೂ. ದಂಡ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ವಿರುದ್ಧ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ದೊಡ್ಡ ಕ್ರಮ ಜರುಗಿದೆ. 127 ಕೆಜಿ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿದ ಆರೋಪ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ) ನಟಿಗೆ 102 ಕೋಟಿ ರೂ. ದಂಡ ವಿಧಿಸಿದೆ. ಡಿಆರ್ಐ ನಡೆಸಿದ ದೀರ್ಘ ತನಿಖೆಯಲ್ಲಿ ರನ್ಯಾ ರಾವ್ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಬಹಿರಂಗವಾಗಿದೆ. 1 ವರ್ಷದಲ್ಲಿ ಸುಮಾರು 127 ಕೆಜಿ ಚಿನ್ನವನ್ನು ಬೆಂಗಳೂರಿಗೆ ತರಲಾಗಿದ್ದು, … Read more

ಗಣೇಶ ವಿಸರ್ಜನೆ ವೇಳೆ ಇಬ್ಬರ ಸಾವು

ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರಾಜ್ಯದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆಗಳು ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿವೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಂಜುನಾಥ್ ಮೃತ ವ್ಯಕ್ತಿಯಾಗಿದ್ದು, ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ … Read more

ಸಿಎಂ ಭೇಟಿಯಾದ ಕನ್ನಡ ನಟಿಯರು

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸ್ಯಾಂಡಲ್ ವುಡ್ ಹಿರಿಯ ನಟಿಯರು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟ ಡಾ.ವಿಷ್ಣು ವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವಂತೆ ಮನವಿ ಮಾಡಲಾಗಿದೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹಿರಿಯ ನಟಿಯರಾದಂತ ಜಯಮಾಲ, ಮಾಳವಿಕಾ ಅವಿನಾಶ್ ಹಾಗೂ ಕೃತಿ ಭೇಟಿ ಮಾಡಿದರು.ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದಂತ ಕನ್ನಡದ ಹಿರಿಯ ನಟಿಯರು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು.

ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

ಶಿವಮೊಗ್ಗ: 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವುದು ಶಿವಮೊಗ್ಗ ಜಿಲ್ಲೆಯಿಂದ ವರದಿಯಾಗಿದೆ. ಬಾಲಕಿ ಹೊಟ್ಟೆ ನೋವು ಎಂದು ಶಾಲೆಗೆ ರಜೆ ಹಾಕಿದ್ದಳು. ರಜೆ ಹಾಕಿದ್ದ ಎರಡು ದಿನದ ಬಳಿಕ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣವೇ ಆಕೆಯನ್ನ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 7 ತಿಂಗಳಿಗೆ ಮಗು ಜನಿಸಿದ್ದು, 1.8 ಕೆಜಿ ತೂಕವಿದ್ದು, ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ … Read more