
ಬೆಂಗಳೂರು: ಡಿಸೇಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ನಡೆದಂತ ಭೀಕರ ಅಪಘಾತದಲ್ಲಿ ಸೌದಿ ಅರೇಬಿಯಾದಲ್ಲಿ ಕನ್ನಡಿಗ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಡೀಸೆಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಧಗಧಗಿಸಿ ಹೊತ್ತಿ ಬಸ್ ಉರಿದಿತ್ತು.
ಈ ಅಪಘಾತದಲ್ಲಿ 45 ಭಾರತೀಯರು ಸಜೀವ ದಹನವಾಗಿದ್ದರು. ಡೀಸೆಲ್ ಟ್ಯಾಂಕರ್, ಬಸ್ ನಡುವಿನ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪಾಸ್ ಪೋರ್ಟ್ ನಲ್ಲಿ ಕರ್ನಾಟಕದ ಹುಬ್ಬಳ್ಳಿಯ ವಿಳಾಸವಿರುವುದಾಗಿ ಹೇಳಲಾಗುತ್ತಿದೆ. ಸೌದಿ ಅರೇಬಿಯಾ ಅಪಘಾತದಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ವ್ಯಕ್ತಿಯ ಮೂಲ ಪತ್ತೆಗೆ ಹೈದರಾಬಾದ್ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸೌದಿ ಅರೇಬಿಯಾ ಅಪಘಾತದಲ್ಲಿ ಕನ್ನಡಿಗ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


