ಸೌದಿ ಅರೇಬಿಯಾ ಅಪಘಾತದಲ್ಲಿ ಕನ್ನಡಿಗ ಸಾವು

ಬೆಂಗಳೂರು: ಡಿಸೇಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ನಡೆದಂತ ಭೀಕರ ಅಪಘಾತದಲ್ಲಿ ಸೌದಿ ಅರೇಬಿಯಾದಲ್ಲಿ ಕನ್ನಡಿಗ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಡೀಸೆಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಧಗಧಗಿಸಿ ಹೊತ್ತಿ ಬಸ್ ಉರಿದಿತ್ತು. ಈ ಅಪಘಾತದಲ್ಲಿ 45 ಭಾರತೀಯರು ಸಜೀವ ದಹನವಾಗಿದ್ದರು. ಡೀಸೆಲ್ ಟ್ಯಾಂಕರ್, ಬಸ್ ನಡುವಿನ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪಾಸ್ ಪೋರ್ಟ್ ನಲ್ಲಿ ಕರ್ನಾಟಕದ ಹುಬ್ಬಳ್ಳಿಯ ವಿಳಾಸವಿರುವುದಾಗಿ … Read more

ಸೌದಿಯಲ್ಲಿ ಬಸ್ ದುರಂತ – ಓರ್ವ ಪಾರು

ಸೌದಿ ಅರೇಬಿಯಾ: ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್ಸಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 42 ಭಾರತೀಯರು ಸಜೀವ ದಹನವಾಗಿದ್ದು, ಅದೃಷ್ಟವಶಾತ್ ಓರ್ವ ಅಪಾಯದಿಂದ ಪಾರಾಗಿದ್ದಾನೆ. ಅಚ್ಚರಿಯ ರೀತಿಯಲ್ಲಿ 24 ವರ್ಷದ ಮೊಹಮ್ಮದ್ ಅಬ್ದುಲ್ ಶೋಯಾಬ್ ಎನ್ನುವಾತ ಬದುಕುಳಿದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅವರ ಸ್ಥಿತಿ ಕುರಿತು ಇನ್ನೂ ಮಾಹಿತಿ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತರಲ್ಲಿ ಹೆಚ್ಚಿನವರು ಹೈದರಾಬಾದ್ ನಿವಾಸಿಗಳು ಎಂದು ವರದಿಯಾಗಿದೆ. ಈ ಪೈಕಿ 16 ಮಂದಿ … Read more

ದೆಹಲಿ ಕಾರ್ ಸ್ಫೋಟ ಕೇಸ್- ತುಮಕೂರಿನ ವ್ಯಕ್ತಿ ವಿಚಾರಣೆ

ತುಮಕೂರು: ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬನ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರು ದಿನ ತುಮಕೂರಿನಲ್ಲಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಎಎಸ್ ಪಿ ಪುರುಷೋತ್ತಮ್ ರಿಂದ ಎರಡು ಗಂಟೆಗಳ ಕಾಲ್ ವಿಚಾರಣೆ ನಡೆಸಿ ಸ್ಫೋಟದಲ್ಲಿ ಕೈವಾಡ ಇಲ್ಲದೆ ಇದ್ದು ಘಟನೆಯಲ್ಲಿ ಭಾಗಿಯಾಗದ ಬಗ್ಗೆ ಖಾತರಿ ಆದ ನಂತರ ಬಿಟ್ಟು ಕಳಿಸಿದ್ದಾರೆ. ಈ ಹಿಂದೆ … Read more

ಪ್ರವಾಸಿಗ ಮಹಿಳೆ ಮೇಲೆ ಚಿರತೆ ದಾಳಿ

ಬೆಂಗಳೂರು: ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿ ವೇಳೆ ಆತಂಕಕಾರಿ ಘಟನೆಯೊಂದು ನಡೆದಿದೆ. ಚೆನ್ನೈನಿಂದ ಬಂದಿದ್ದ ಪ್ರವಾಸಿಗ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದೆ. ಚೆನ್ನೈ ಮೂಲದ 50 ವರ್ಷದ ವಹಿತ ಬಾನು ಎಂಬುವವರು ತಮ್ಮ ಪತಿ ಮತ್ತು ಮಗನೊಂದಿಗೆ ಬನ್ನೇರುಘಟ್ಟಕ್ಕೆ ಸಫಾರಿಗೆ ಆಗಮಿಸಿದ್ದರು. ಅವರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಾಹನದಲ್ಲಿ ಸಫಾರಿ ವೀಕ್ಷಿಸುತ್ತಿದ್ದರು. ದುರದೃಷ್ಟವಶಾತ್, ವಹಿತ ಬಾನು ಅವರು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಸಲುವಾಗಿ ವಾಹನದ ಗ್ಲಾಸ್ ತೆರೆದಿದ್ದರು ಎನ್ನಲಾಗಿದೆ. ಈ … Read more

ಅಪಘಾತ ಇಬ್ಬರು ಸಾವು

ಕಲಬುರಗಿ: ಮಂಗಳವಾರ ಬೆಳಿಗ್ಗೆ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪುರುಷರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಜಿಲ್ಲೆಯ ಕೊಲ್ಲೂರು ಗ್ರಾಮದ ಶರಣಬಸಪ್ಪ (32) ಮತ್ತು ಬಾಗಣ್ಣ (30) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರಾಗಿರುವ ಶರಣಬಸಪ್ಪ ಅವರು ಜೇವರ್ಗಿಯಿಂದ ಕಲಬುರಗಿಗೆ ಬಾಗಣ್ಣ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಫರಹತಾಬಾದ್ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಮೋಟಾರ್ … Read more

ನಟ ದರ್ಶನ್ ಆಪ್ತ ಧನ್ವೀರ್ ಮೊಬೈಲ್ ಜಪ್ತಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೇ ನಟ ದರ್ಶನ್ ಆಪ್ತ, ನಟ ಧನ್ವೀರ್ ಅವರ ಮೊಬೈಲ್ ಜಪ್ತಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯದ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಟ ಧನ್ವೀರ್ ವಿಚಾರಣೆ ನಡೆಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ ಅವರು ನಟ ಧನ್ವೀರ್ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯ ವೇಳೆಯಲ್ಲಿ ನಟ ಧನ್ವೀರ್ ನನಗೆ ಪರಪ್ಪನ ಅಗ್ರಹಾರ … Read more

ವಿಡಿಯೋ ಕಾನ್ಫರ್ಸ್ ಮೂಲಕ ನಟ ದರ್ಶನ್ ಹಾಜರು

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿ ಆರ್ ಪಿಸಿ ಸೆಕ್ಷನ್ 294 ಅಡಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದು, ಬೆಂಗಳೂರಿನ 57ನೇ ಇಇಏ ಕೋರ್ಟಿಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಲಿದ್ದಾರೆ. ಈ ವೇಳೆ ವೀಡಿಯೋ ಕಾನ್ಫರ್ಸ್ ಮೂಲಕ ಕೊಲೆ ಆರೋಪಿ ದರ್ಶನ್ ಹಾಜರಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಆರ್ಪಿಸಿ ಸೆಕ್ಷನ್ 294 ಅಡಿ ಸಹಾಯಕ ಎಸ್ ಪಿ ಪಿ ಸಚಿನ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ವಿಡಿಯೋ ಕಾನ್ಫರ್ಸ್ ಮೂಲಕ … Read more

ಸ್ನೇಹಿತೆಯ ಸಾವಿನಿಂದ ಮನನೊಂದು ಬಾಲಕಿ ಆತ್ಮಹತ್ಯೆ

ಬೆಂಗಳೂರು: ಸ್ನೇಹಿತೆಯ ಸಾವಿನಿಂದ ಮನನೊಂದ ಬಾಲಕಿಯೊಬ್ಬಳು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಬೆಂಗಳೂರಲ್ಲಿ 9ನೇ ತರಗತಿ ಬಾಲಕಿ ಸೂಸೈಡ್ ಮಾಡಿಕೊಂಡಿದ್ದಾಳೆ. 16 ವರ್ಷದ ಶರ್ಮಿಳಾ ಆತ್ಮಹತ್ಯೆಗೆ ಶರಣಾದ ಬಾಲಕಿಯಾಗಿದ್ದಾಳೆ. ಕಲಾಸಿಪಾಳ್ಯದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. 10ನೇ ತರಗತಿ ಗೆಳತಿಯೊಂದಿಗೆ ಶರ್ಮಿಳಾಗೆ ತುಂಬಾನೇ ಸ್ನೇಹವಾಗಿತ್ತು. ಮತ ಗೆಳತಿ ಮತ್ತು ಶರ್ಮಿಳಾ ಇಬ್ಬರೂ ಆತ್ಮೀಯರಾಗಿದ್ದರು. 3 ತಿಂಗಳ ಹಿಂದೆ ಗೆಳತಿ ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಯ ಸಾವಿನಿಂದ ಮನನೊಂದು ನಿನ್ನೆ ಶರ್ಮಿಳಾ ಮನೆಯಲ್ಲಿ ನೇಣಿಗೆ … Read more

ಅಧಿಕಾರಿಗಳ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಗದಗ: ಬೆಳೆಹಾನಿ ಪರಿಹಾರ ಬಾರದಕ್ಕೆ ಮನನೊಂದು ರೈತ ನಾಡಕಚೇರಿಯಲ್ಲಿ ಅಧಿಕಾರಿಗಳ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ರೈತ ಸಿದ್ದನಗೌಡ ಹಿರೇಗೌಡ್ರು ಆತ್ಮಹತ್ಯೆಗೆ ಯತ್ನಿಸಿದ್ದು, ಸಂಕಟ ತಾಳಲಾರದೆ ನಾಡ ಕಚೇರಿಯಲ್ಲೇ ನರಳಾಡಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಗೋವಿನ ಜೋಳ, ಈರುಳ್ಳಿ ಬೆಳೆಯನ್ನ ಸಿದ್ದನಗೌಡ ಹಿರೇಗೌಡ್ರು ಬೆಳೆದಿದ್ದರು. ಆದರೆ, ಮಳೆ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬೆಳೆಗೆ ಹಾನಿಯಾಗಿದೆ. ಹೀಗಿದ್ದರೂ ಈ … Read more