ಪೈರಸಿ ಮಾಡೋದು ದರೋಡೆಗೆ ಸಮಾನ: ಜಗ್ಗೇಶ್ ಗರಂ
ಬೆಂಗಳೂರು: ಕನ್ನಡ ಚಿತ್ರರಂಗವನ್ನು ಪೈರಸಿ ಎಂಬ ಮಹಾಮಾರಿ ಕಾಡುತ್ತಿದ್ದು, ಇದರ ವಿರುದ್ಧ ನಟ ಕಿಚ್ಚ ಸುದೀಪ್ ಧ್ವನಿ ಎತ್ತಿದ ಬೆನ್ನಲ್ಲೇ ಈಗ ನಟ ಜಗ್ಗೇಶ್ ಕೂಡ ಆಕ್ರೋಶ ಹೊರಹಾಕಿದ್ದಾರೆ. ಜಗ್ಗೇಶ್ ಅವರ ಸಹೋದರ ಕೋಮಲ್ ಕುಮಾರ್ ನಟನೆಯ ಕೋಣ ಸಿನಿಮಾ ಇತ್ತೀಚೆಗೆ ಪೈರಸಿಗೆ ತುತ್ತಾಗಿತ್ತು. ಈ ಕುರಿತು ಜಗ್ಗೇಶ್ ಅವರು ನೀಡಿದ್ದ ದೂರಿನನ್ವಯ ಕಾರ್ಯಪ್ರವೃತ್ತರಾದ ನಂದಿನಿ ಲೇಔಟ್ ಪೊಲೀಸರು, ಪೈರಸಿ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೇಸ್ ಬುಕ್ ಲೈವ್ ಬಂದು ಪೈರಸಿ ವಿರುದ್ಧ ಗುಡುಗಿರುವ … Read more






