ಬೈಕ್ ಗೆ ಶಾಲಾ ಬಸ್ ಡಿಕ್ಕಿ: ಇಬ್ಬರು ಮಕ್ಕಳ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಗೆ ಶಾಲಾ ಬಸ್ ವೊಂದು ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದ ಮಕ್ಕಳ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಕ್ಕಳನ್ನು 2 ವರ್ಷದ ವರ್ಷಾ ಹಾಗೂ 4 ವರ್ಷದ ಭಾನು ಎಂದು ಗುರುತಿಸಲಾಗಿದೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿ ಪೊಲೀಸ್ ಪೇದೆ ನಾಗನಗೌಡ ತನ್ನ ಮಗಳು ವರ್ಷಾ ಹಾಗೂ ಅಣ್ಣನ ಮಗಳು ಭಾನುಳನ್ನು ಬೈಕ್ … Read more

ಕಿರುಕುಳಕ್ಕೆ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ

ಮಂಡ್ಯ: ನೆರೆಮನೆಯವರ ಕಿರುಕುಳಕ್ಕೆ ಬೇಸತ್ತು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ದಳವಾಯಿ ಕೋಡಿಹಳ್ಳಿ ಎಂಬ ಗ್ರಾಮದಲ್ಲಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಂತ್ರಸ್ತರನ್ನು 46 ವರ್ಷದ ಶಕುಂತಲಾ ದೇವಿ ಮತ್ತು ಅವರ 19 ವರ್ಷದ ಮಗಳು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ಅವರ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಕುಟುಂಬ ಸಿದ್ಧತೆಯಲ್ಲಿ ತೊಡಗಿತ್ತು ಎನ್ನಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ತಾಯಿ ಮತ್ತು ಮಗಳು ನೆರೆಹೊರೆಯವರಿಂದ ಬೆದರಿಕೆ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ. ಮದುವೆ ಸಿದ್ಧತೆ ಮುಂದುವರೆದಂತೆ … Read more

ಚಿನ್ನಸ್ವಾಮಿಯಲ್ಲಿ ಐಪಿಎಲ್- ಫೆ. 12ಕ್ಕೆ ಸಭೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳು ನಡೆಯುವುದು ಗೃಹ ಇಲಾಖೆಯ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದು, ಗೃಹ ಸಚಿವ ಜಿ.ಪರಮೇಶ್ವರ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಜಸ್ಟೀಸ್ ಕುನ್ಹಾ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಸೂಚಿಸಿದೆ. ಕ್ರೀಡಾಂಗಣದಲ್ಲಿ ಕಾಲ್ತುಳಿತದಂತಹ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಆಯುಕ್ತರ ನೇತೃತ್ವದ ಸಮಿತಿ ಈಗಾಗಲೇ ಕೆಲವು ಶಿಫಾರಸುಗಳನ್ನು ನೀಡಿದೆ. ಫೆ.12ರಂದು ಗೃಹ ಸಚಿವರು ಉನ್ನತ ಮಟ್ಟದ … Read more

ಮಾಂಗಲ್ಯ ಸರ ಕಳವು- ಸ್ಥಳದಲ್ಲೇ ಮಹಿಳೆ ಸಾವು

ನೆಲಮಂಗಲ: ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಳವು ಮಾಡುವಾಗ ಸರಗಳ್ಳರು ಮಹಿಳೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಜ್ಯೋತಿ (45) ಎಂಬವರು ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆ ಮುಂದೆ ಕಸ ಗುಡಿಸುವಾಗ ಬೈಕ್ ನಲ್ಲಿ ಬಂದ ಸರಗಳ್ಳರು ಮಹಿಳೆಯ ಮುಖಕ್ಕೆ ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ಈ ವೇಳೆ ಆಕೆ ಕುಸಿದು ಬಿದ್ದಿದ್ದಾರೆ. ಕಳ್ಳರು ಮಹಿಳೆಯ ಕೊರಳಲ್ಲಿದ್ದ 70 ಗ್ರಾಂ ತೂಕದ ಮಾಂಗಲ್ಯ … Read more

ಆಟೋ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಓರ್ವ ಸಾವು

ಬೆಂಗಳೂರು: ಆಟೋ ಪಾರ್ಕಿಂಗ್ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾಗಿದ್ದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ತಡರಾತ್ರಿ ನಾಯಂಡಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಗುಣ (28) ಎಂಬಾತನನ್ನ ಹತ್ಯೆ ಮಾಡಲಾಗಿದ್ದು, ಆತನ ಸ್ನೇಹಿತ ವೇಲು ಎಂಬಾತ ಗಾಯಗೊಂಡಿದ್ದಾನೆ. ಪ್ರಕರಣ ಸಂಬಂಧ ವಿನೋದ್, ಅಜಿತ್, ಕುರ್ಮಾ ಮತ್ತು ದೀನ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದೇ ಏರಿಯಾ ನಿವಾಸಿಗಳಾಗಿದ್ದ ಗುಣ ಹಾಗೂ ವಿನೋದ್ ನಡುವೆ ಆಟೋ ನಿಲ್ಲಿಸುವ ವಿಚಾರಕ್ಕೆ ಎರಡು ದಿನಗಳ ಹಿಂದಷ್ಟೆ ಗಲಾಟೆಯಾಗಿತ್ತು. ಆ … Read more

ಕಾರು ಡಿವೈಡರ್ ಗೆ ಡಿಕ್ಕಿ: ಒರ್ವ ಸಾವು

ಅರಸೀಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬೆಂಕಿಗೆ ಆಹುತಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಒಬ್ಬರು ಮೃತಪಟ್ಟರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಹ್ಯುಂಡೈ ಐ-20 ಕಾರು ಅತಿ ವೇಗವಾಗಿ ಚಲಿಸುತ್ತಿತ್ತು. ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಲವು ಬಾರಿ ಉರುಳಿ ಪಕ್ಕದ ಲೇನ್ಗೆ ಬಿದ್ದಿದೆ. ವಿದ್ಯುತ್ … Read more

7ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಬೆಂಗಳೂರು: ಬಾಲಕ ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಪಬ್ ಮಾಲೀಕರ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವರಿ 31ರಂದು ವಿಷ್ಣುವರ್ಧನ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನ 7ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕ ಮೃತಪಟ್ಟಿದ್ದ. ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಬಾಲಕ ಪಬ್ವೊಂದರಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಹಾಗೂ ಧೂಮಪಾನ ಮಾಡಿರುವುದು ಗೊತ್ತಾಗಿತ್ತು. ನಂತರ ಬಾಲಕನ ಸ್ನೇಹಿತರು ಆತನನ್ನು ಮನೆಗೆ ತಲುಪಿಸಿದ್ದರು. … Read more

ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆ: ಮೂವರು ಸಾವು

ಕನಕಪುರ: ಅಡುಗೆ ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕನಕಪುರದ ಅಮರನಾರಾಯಣ ಬ್ಲಾಕ್ ನ ಪ್ರಶಾಂತ್ (22), ಅವರ ತಾಯಿ ಸವಿತಾ (45) ಮತ್ತು ತಂದೆ ಸಿದ್ದರಾಜು (50) ಸಾವನ್ನಪ್ಪಿದ್ದಾರೆ. ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೋಂಡ ಮತ್ತು ಕಾರ ಮಿಕ್ಸರ್ ಮಾರುವ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್, ಸೋಮವಾರ ಮನೆಯಲ್ಲೇ ಕಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಶಾಂತ್, … Read more