ಜನರ ಜೀವನ ಕಸಿದ ಕೇಂದ್ರ ಸರ್ಕಾರ: ಸುರ್ಜೆವಾಲಾ ವಾಗ್ದಾಳಿ

ಬೆಂಗಳೂರು: ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಟೋಲ್, ಔಷಧ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವನ ಕಸಿಯಲಿದೆ. ಏಪ್ರಿಲ್ 1ರಿಂದ ಶೇ 5ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಹೆದ್ದಾರಿ ನಿರ್ಮಾಣಕ್ಕೂ ಮೊದಲೇ ಕೆಲವು ಕಡೆ … Read more

ಸಿಡಿಲು ಬಡಿದು ರೈತ ಸಾವು

ಬೀದರ್: ಕೃಷಿ ಕೆಲಸಕ್ಕೆ ಜಮೀನಿಗೆ ಹೋಗಿದ್ದಾಗ ಸಿಡಿಲು ಬಡಿದು ಯುವರೈತ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ. ರಾಹುಲ್ ಭಾಸ್ಕರ್ (25) ಸಿಡಿಲಿಗೆ ಬಲಿಯಾದ ರೈತ. ರಾಹುಲ್ ತಮ್ಮ ಜಮೀನಿಗೆ ತೆರಳಿದ್ದ ವೇಳೆ ಮಳೆ ಆರಂಭವಾಗಿ ಜಮೀನಿನಲ್ಲಿದ್ದ ರಾಹುಲ್‌ಗೆ ಸಿಡಿಲು ಬಡಿದು ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಮುಂಜಾನೆ ಹಲವೆಡೆ ಮಳೆಯಾಗಿದೆ.

ಪೆಟ್ರೋಲ್ ಕ್ಯಾನ್‌ ಗೆ ಬೆಂಕಿ ಹೊತ್ತಿ ಮಹಿಳೆ ಸ್ಥಿತಿ ಗಂಭೀರ

ಧಾರವಾಡ: ಮನೆಯಲ್ಲಿ ಸಂಗ್ರಹ ಮಾಡಿದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿ ಗೃಹಿಣಿ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೂರ್ಣಿಮಾ ಕಲ್ಲಪ್ಪ ಹಾದಿಮನಿ (32) ತೀವ್ರವಾಗಿ ಗಾಯಗೊಂಡಿದ್ದಾರೆ. ಶೇ.80ರಷ್ಟು ದೇಹ ಸುಟ್ಟಿರುವ ಕಾರಣ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಪೆಟ್ರೋಲ್ ಅಭಾವ ಆಗಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಅನ್ನು ಕ್ಯಾನ್‌ನಲ್ಲಿ ಸಂಗ್ರಹಿಸಿ ಮನೆಯ ಫ್ರಿಡ್ಜ್ ಬಳಿ ಇಡಲಾಗಿತ್ತು. ಪೂರ್ಣಿಮಾ ಅಡುಗೆ ಮನೆಯಲ್ಲಿದ್ದಾಗ ಏಕಾಏಕಿ ಕ್ಯಾನ್‌ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. … Read more

ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು: ಬೆಂಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಹಲವು ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಕಲಬುರಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ … Read more

ಹಾಲಿನ ಬೆಲೆ ಹೆಚ್ಚಳ: ಡಿಕೆಸು ಮುನ್ಸೂಚನೆ

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಬಳಕೆ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ಯಾಸ್ ಸಮಸ್ಯೆಯಿಂದ ಸಹಜವಾಗಿ ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ತೈಲ ಸರಬರಾಜಿನಲ್ಲಿ ಸಮಸ್ಯೆಯಿಲ್ಲ. ಆದರೆ ಅಡುಗೆ ಅನಿಲವನ್ನು ಶೇ.55ರಷ್ಟು ಮಾತ್ರ ಬಳಕೆ ಮಾಡಬೇಕು ಎಂಬ ನಿರ್ದೇಶನವಿದೆ. ಶೇಕಡಾ ನೂರರಷ್ಟು ಅಡುಗೆ ಅನಿಲ ಬಳಕೆ ಮಾಡಬೇಕಾದರೆ ಶೇ.35ರಷ್ಟು ಹೆಚ್ಚುವರಿ ಶುಲ್ಕ … Read more

ಹಾರ್ಮುಜ್ ದಾಟಲು ಸುಂಕ ಸಂಗ್ರಹ

ಅಮೆರಿಕ-ಇಸ್ರೇಲ್ ಸೇರಿದಂತೆ ಶತೃ ದೇಶದ ಹಡಗುಗಳಿಗೆ ಇರಾನ್ ನಿಷೇಧ ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಸುಂಕ ಸಂಗ್ರಹಿಸುವ ಹೊಸ ಯೋಜನೆಗೆ ಇರಾನ್ ಸಂಸತ್ತಿನ ಭದ್ರತಾ ಸಮಿತಿ ಅನುಮೋದನೆ ನೀಡಿದೆ. ಕೆಲವು ದೇಶಗಳ ಹಡುಗಳಿಂದ ಸುಂಕ ಸಂಗ್ರಹಿಸಲಾಗುತ್ತದೆ. ಆದರೆ, ಶತೃ ದೇಶಗಳ ಹಡಗುಗಳ ಮೇಲೆ ನಿರ್ಬಂಧವನ್ನು ಹೇರಲು ಇರಾನ್ ಸರ್ಕಾರ ಮುಂದಾಗಿದೆ. ಈ ಯೋಜನೆಯು ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ರಿಯಾಲ್ ಆಧಾರಿತ ಟೋಲ್ ವ್ಯವಸ್ಥೆಯನ್ನ ಪರಿಚಯಿಸುತ್ತದೆ. ಇದು ಕಡಲ ಭದ್ರತೆ, ಹಡಗುಗಳ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಜಲಸಂಧಿಯ … Read more

ಇಸ್ಪಹಾನ್‌ ನಲ್ಲಿ ಸರಣಿ ಸ್ಫೋಟ

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಪ್ರತೀಕಾರದ ದಾಳಿ ಮುಂದುವರಿಸಿವೆ. ಇರಾನ್‌ನ ಇಸ್ಪಹಾನ್ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದೆ. ಸುಮಾರು 907 ಕೆಜಿ ಬಂಕರ್ ಬಸ್ಟರ್ ಬಾಂಬ್‌ಗಳಿಂದ ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಇಸ್ಫಹಾನ್ ನಗರದಲ್ಲಿ ಮಂಗಳವಾರ ಮುಂಜಾನೆ ಈ ಸ್ಫೋಟ ಸಂಭವಿಸಿದೆ. ದೃಶ್ಯಾವಳಿಗಳಲ್ಲಿ ಸರಣಿ ಸ್ಫೋಟ ಆಗಿರುವುದು ಸೆರೆಯಾಗಿದೆ. ಮುಗಿಲೆತ್ತರಕ್ಕೆ ಚಿಮ್ಮುವ ಬೆಂಕಿಯಿAದಲೇ ದಾಳಿ ತೀವ್ರತೆ ಗೊತ್ತಾಗುತ್ತೆ. ಬದ್ರ್ ಮಿಲಿಟರಿ ವಾಯು ನೆಲೆಯಾಗಿರುವ … Read more

ಇಂದಿನಿಂದ ‘ದುಬಾರಿ ದುನಿಯಾ’

ರಾಜ್ಯ ಸರ್ಕಾರದಿಂದ ತೆರಿಗೆ ಏರಿಕೆ ಬಿಸಿ ಕೇಂದ್ರದ ಜಿಎಸ್ ಟಿ ಬರೆ ಬೆಂಗಳೂರು: ಹೊಸ ಆರ್ಥಿಕ ವರ್ಷ ಏ.1ರಿಂದ ಅನ್ವಯ ಆಗುವಂತೆ ಜನರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯ ಹೊರೆ ಏರಲು ಸ್ಪರ್ಧೆಯಲ್ಲಿ ಮುಂದಾಗಿವೆ. ಹೊಸ ಆರ್ಥಿಕ ವರ್ಷದ ಆರಂಭವಾಗುವ ನಾಳೆಯಿಂದ ಜನ ಜೀವನವೂ ದುಬಾರಿಯಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುವಂತೆ ರಾಜ್ಯ ಸರ್ಕಾರ ವಿದ್ಯುತ್ ಹಾಗೂ ಬೆಂಗಳೂರು ನಗರದಲ್ಲಿ ನೀರಿನ ದರ ಏರಿಕೆಯಾಗಲಿದೆ. ಈ ಮೂಲಕ ಗ್ರಾಹಕರಿಗೆ ದರ ಏರಿಕೆಯ … Read more

ನಾಳೆ ಸಿದ್ದಗಂಗಾ ಶ್ರೀ ಜಯಂತಿ ರಾಷ್ಟ್ರಪತಿ ಮುರ್ಮು ಆಗಮನ *ದಾಸೋಹ ದಿನ ಘೋಷಣೆಗೆ ಒತ್ತಾಯ

ತುಮಕೂರು: ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಏಪ್ರಿಲ್ 1ರಂದು ಸಿದ್ದಗಂಗಾ ಮಠದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಘೋಷಿಸುವಂತೆ ಒತ್ತಾಯ ಕೇಳಿಬಂದಿದೆ. ಬುಧವಾರ ಪ್ರಾತಃ ಕಾಲದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ವಿವಿಧ ಮಠ ಮಾನ್ಯಗಳ ಸಾಧು ಸಂತರ ಮಂತ್ರಘೋಷಗಳೊAದಿಗೆ ಪೂಜಾ ಕೈಂಕರ್ಯ ನೆರವೇರಲಿದೆ. ರಾಷ್ಟ್ರಪತಿ ಮುರ್ಮು … Read more

ಹೃದಯಾಘಾತದಿಂದ ಭಕ್ತ ಸಾವು

ನಂಜನಗೂಡು: ನಂಜುಂಡೇಶ್ವರ ರಥೋತ್ಸವ ನೋಡಲು ಸೋಮವಾರ ಇಲ್ಲಿಗೆ ಬಂದಿದ್ದ ರಾಮನಗರ ಜಿಲ್ಲೆ ಮಾಗಡಿ ನಿವಾಸಿ ನಂಜುಂಡಸ್ವಾಮಿ (54) ಹೃದಯಾಘಾತದಿಂದ ಮೃತಪಟ್ಟರು. ಮಗ, ಸೊಸೆಯೊಂದಿಗೆ ಬಂದಿದ್ದ ಅವರು ರಥೋತ್ಸವ ಆರಂಭಕ್ಕೂ ಮುನ್ನ, ಮುಂಜಾನೆ 5ಕ್ಕೆ ರಥ ಬೀದಿಯಲ್ಲಿ ಸುಸ್ತಾಗಿ ಕುಳಿತುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೇರು ಸಾಗುತ್ತಿದ್ದಾಗ ಉಂಟಾದ ನೂಕು ನುಗ್ಗಲಿನಲ್ಲಿ ಶ್ರೀರಾಂಪುರದ ರಂಗಸ್ವಾಮಿ ಎಂಬುವರು ಗಾಯಗೊಂಡರು. ನೂಕಾಟ ಆರಂಭವಾದಾಗ ಮಗುವನ್ನು ಕೈಹಿಡಿದುಕೊಳ್ಳಲು ಹೋಗಿ ಬ್ಯಾರಿಕೇಡ್ ಗೆ ಮುಖಕೊಟ್ಟರು. ಅದರಿಂದ ಗಾಯಗೊಂಡ … Read more