ಗುಂಡ್ಲುಪೇಟೆ ತಾಲ್ಲೂಕಿನ ಚೆನ್ನಮಲ್ಲಿಪುರ ಗ್ರಾಮದ ರೈತರ ಜಮೀನಿನ ಬಾಳೆತೋಟ ಹಾಗೂ ಆಸುಪಾಸಿನಲ್ಲಿ ಮರಿಯೊಟ್ಟಿಗೆ ತಾಯಿ ಹುಲಿ ವಾಸ್ತವ್ಯ ಹೂಡಿರುವುದು ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಹುಲಿಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಮೂಲಕ ನಿಗಾ ವಹಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯ ವ್ಯಾಪ್ತಿಯ ಚೆನ್ನಮಲ್ಲಿಪುರ ಗ್ರಾಮದ ರೈತ ನಾಗಪ್ಪ ಎಂಬವರ ಜಮೀನಿನಲ್ಲಿ ಕಳೆದ ಮೂರು ದಿನದ ಹಿಂದೆ ಒಂದೂವರೆ ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಇದಾದ ಬಳಿಕ ಮರಿಯೊಂದಿಗೆ ತಾಯಿ ಹುಲಿ ಓಡಾಟ ನಡೆಸುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದ್ದೂರು ವಲಯದಲ್ಲಿ ಪ್ರತ್ಯಕ್ಷವಾಗಿರುವ ತಾಯಿ ಹಾಗೂ ಮರಿ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಕೂಂಬಿAಗ್ ನಡೆಸಲು ತೀರ್ಮಾನಿಸಿದೆ. ಕುಶಾಲನಗರದಿಂದ ಇಂದು ಸಾಕಾನೆಗಳು ಬರಲಿವೆ. ಮದ್ದೂರು ಹಾಗೂ ಮೂಲೆಹೊಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾಳೆತೋಟದ ಸುತ್ತಮುತ್ತ ಬೀಡುಬಿಟ್ಟಿರುವ ಹುಲಿಗಳ ಚಲನವಲನದ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಆರ್ ಎಫ್ ಓ ಪುನೀತ್ ತಿಳಿಸಿದ್ದಾರೆ.
ಮತ್ತೆರಡು ಹುಲಿ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


