
ಮುಂಬೈ: ಭಾರತದ ರೂಪಾಯಿ 12 ವರ್ಷಗಳ ಬಳಿಕ ಡಾಲರ್ ವಿರುದ್ಧ ಒಂದೇ ದಿನ ಅತಿದೊಡ್ಡ ಏರಿಕೆ ದಾಖಲಿಸಿದೆ. ಮಾ.31ರಂದು ಒಂದು ಡಾಲರ್ಗೆ 95 ರೂ. ದಾಟಿದ್ದ ರೂಪಾಯಿ ಮೌಲ್ಯ ಗುರುವಾರ 93.14 ರೂ. ಅಸುಪಾಸಿನಲ್ಲಿ ವ್ಯವಹಾರ ನಡೆಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂ. ಮೌಲ್ಯ ಕುಸಿತ ತಡೆಗೆ ಹಲವು ಕ್ರಮಕೈಗೊಂಡ ಬಳಿಕ ರೂಪಾಯಿ ಮೌಲ್ಯ ಒಂದೇ ದಿನದಲ್ಲಿ ಸುಮಾರು ಶೇ.1.8ನಷ್ಟು ಏರಿಕೆ ಕಂಡಿದೆ.
ಟ್ರಂಪ್ ಭಾಷಣದ ಬಳಿಕ ವಿಶ್ವದ ಷೇರು ಮಾರುಕಟ್ಟೆಗಳು ಕುಸಿದಿದ್ದವು. ಪರಿಣಾಮ ಬೆಳಗ್ಗೆ ಸೆನ್ಸೆಕ್ಸ್ 1,588 ಅಂಕ ಕುಸಿದಿದ್ದರೆ ನಿಫ್ಟಿ 496 ಅಂಕ ಕುಸಿದಿತ್ತು. ಆದರೆ ರೂಪಾಯಿ ಮೌಲ್ಯ ಚೇತರಿಕೆ, ನಿಫ್ಟಿ ಐಟಿ ಸೂಚ್ಯಂಕ 772 ಅಂಕ (2.6%) ರಷ್ಟು ಏರಿಕೆಯಾಗಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಗೆ ಕಾರಣವಾಗಿದೆ. ಸೆನ್ಸೆಕ್ಸ್ ದಿನದ ಕನಿಷ್ಠ ಮಟ್ಟದಿಂದ ಸುಮಾರು 1,700 ಅಂಕಗಳಷ್ಟು ಏರಿಕೆ ಕಂಡು ಅಂತಿಮವಾಗಿ 73,319.55 (+185) ಅಂಕಗಳಲ್ಲಿ ವ್ಯವಹಾರ ಕೊನೆಗೊಳಿಸಿದರೆ ನಿಫ್ಟಿ 530 ಅಂಕಗಳಷ್ಟು ಭರ್ಜರಿ ಚೇತರಿಕೆ ಕಂಡು 22,713.10 (+33) ಅಂಕಗಳಲ್ಲಿ ವ್ಯವಹಾರ ಮುಕ್ತಾಯಗೊಳಿಸಿತು.
ರೂಪಾಯಿ ಮೌಲ್ಯ ದಾಖಲೆ ಏರಿಕೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


