ಮಂಡ್ಯ: ಹುಟ್ಟುಹಬ್ಬದ ಮಾರನೇ ದಿನವೇ ಯುವಕನನ್ನು ಹತ್ಯೆ ಮಾಡಿರುವ ಘಟನೆ ಮದ್ದೂರಿನಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಯಶ್ವಂತ್ (19) ಕೊಲೆಯಾದ ಯುವಕ.
ಮದ್ದೂರಿನ ಕೊಲ್ಲಿ ವೃತ್ತದ ಸೌದೆ ಡಿಪೋ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ವೇಳೆ ಯಶ್ವಂತ್, ಸಚಿನ್ ಹಾಗೂ ದರ್ಶನ್ ಎಂಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಚಿನ್ ಹಾಗೂ ದರ್ಶನ್ ಗಂಭೀರ ಗಾಯಗೊಂಡಿದ್ದಾರೆ.
ಯಶ್ವಂತ್ ಮದ್ದೂರಿನ ಮರಳಿಗ ಗ್ರಾಮದ ಯಶವಂತ್ ರೌಡಿಶೀಟರ್ ಆಗಿದ್ದ. ವಯಸ್ಸು ಚಿಕ್ಕದಾದರೂ ಫೀಲ್ಡಲ್ಲಿ ಹವಾ ಸೃಷ್ಟಿ ಮಾಡಲು ಮುಂದಾಗಿದ್ದ. ಯಶ್ವಂತ್ ಉಪಟಳ ಹೆಚ್ಚಾಗುತ್ತಿದ್ದಂತೆ ಮದ್ದೂರು ಪೊಲೀಸರು ಆತನನ್ನು ಗಡಿಪಾರು ಮಾಡಿದ್ದರು. 6 ತಿಂಗಳು ಬೆಂಗಳೂರು ಸೇರಿದ್ದ. ನಿನ್ನೆ ಹಳೆ ಗಲಾಟೆ ರಾಜಿ ಪಂಚಾಯ್ತಿಗೆ ಹೋದ ಯಶ್ವಂತ್ ಹೆಣವಾಗಿದ್ದಾನೆ. ಮದ್ದೂರು ಪೊಲೀಸರು ದೂರು ದಾಖಲಿಸಿದ್ದಾರೆ.
ರೌಡಿಶೀಟರ್ ಹತ್ಯೆ: ಮತ್ತಿಬ್ಬರು ಗಂಭೀರ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು



