
ನವದೆಹಲಿ: ದೇಶದ ಎಲ್ಲಾ ಟೋಲ್ ಗಳನ್ನ ಡಿಜಿಟಲೀಕರಣಗೊಳಿಸುವತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಏಪ್ರಿಲ್ 10ರಿಂದ ಜಾರಿಯಾಗುವಂತೆ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆ ಬಂದ್ ಆಗಲಿದೆ.
ಟೋಲ್ ಪ್ಲಾಜಾ ಹಾದು ಹೋಗಲು ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25ರಷ್ಟು ಹೆಚ್ಚುವರಿ ಹಣವನ್ನ ಚಾಲಕರು ಪಾವತಿಸಬೇಕಾಗುತ್ತದೆ. ಫಾಸ್ಟ್ಟ್ಯಾಗ್ ಮತ್ತು ಯುಪಿಐ ಎರಡೂ ಪಾವತಿ ವಿಧಾನಗಳನ್ನ ಚಾಲಕರು ನಿರಾಕರಿಸಿದರೆ. ರಾಷ್ಟ್ರೀಯ ಹೆದ್ದಾರಿ ನಿಯಮಗಳಡಿ ವಾಹನ ಪ್ರವೇಶವನ್ನ ನಿರಾಕರಿಸಬಹುದು. ಅಥವಾ ಇ-ನೋಟಿಸ್ ನೀಡಬಹುದು. 3 ದಿನಗಳ ಒಳಗೆ ದಂಡದ ಮೊತ್ತ ಪಾವತಿಸದೆ ಇದ್ದರೆ ದಂಡದ ಮೊತ್ತ ದುಪ್ಪಟ್ಟಾಗಬಹುದು ಎಂದು ಸೂಚಿಸಲಾಗಿದೆ.
ಏ.10ರಿಂದ ನಗದು ರಹಿತ ಟೋಲ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


