
ಬೆಂಗಳೂರು: ಐಪಿಎಲ್ ಟಿ 20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ದಂಧೆಯಲ್ಲಿ ತೊಡಗಿದ್ದ 12 ಮಂದಿಯನ್ನು ಸಿಸಿ ಪೊಲೀಸರು ಬಂಧಿಸಿದ್ದಾರೆ. 1.55 ಲಕ್ಷ ರೂ. ನಗದು ವಶಪಡಿಸಿಕೊಂಡು ಆರೋಪಿಗಳ ಬ್ಯಾಂಕ್ ಅಕೌಂಟ್ ಗಳಲಿದ್ದ 2.5 ಲಕ್ಷ ರೂ.ಹಣವನ್ನು ಲೀನ್ ಮಾಡಿದ್ದಾರೆ.ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂ ಸಿ 13 ಸಾವಿರ ರೂ. ಮುಖ ಬೆಲೆಯ 2 ಟಿಕೆಟ್ ಗಳನ್ನು 32ಸಾವಿರ ರೂ. ಮಾರಾಟ ಮಾಡಿದ್ದು , 1500 ರೂ.ಮುಖ ಬೆಲೆಯ 4 ಟಿಕೆಟ್ ಮಾರಾಟ ಮಾಡಿದ 12,500 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಇದೇ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ 11 ಮಂದಿಯನ್ನು ಬಂಧಿಸಿ ಕಾಳಸಂತೆಯಲ್ಲಿ ಟಿಕೇಟ್ ಮಾರಾಟಕ್ಕೆ ಸಂಬಂಧಿಸಿದಂತೆ 51 ಮೊಬೈಲ್ ಗಳು ಹಾಗೂ ಟಿಕೇಟ್ ಗಳ ಮಾರಾಟದಿಂದ ಸಂಗ್ರಹಿಸಿದಂತಹ ಲಕ್ಷಾಂತರ ರೂ.ನಗದನ್ನು ವಶಪಡಿಸಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



