ತುಮಕೂರು: ಬೆಂಗಳೂರಿನಿಂದ ಬರುವ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಬಸ್‌ಗಳು ಅಗ್ನಿಶಾಮಕ ಠಾಣೆ ಮತ್ತು ಹೆಚ್‌ಎಂಟಿ ಸ್ಟಾಪ್ ಬಳಿ ನಿಲುಗಡೆ ಮಾಡದೆ ಪ್ರಯಾಣಿಕರಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಹೈಕೋರ್ಟ್ ವಕೀಲ ಎಲ್.ರಮೇಶ್‌ನಾಯಕ್ ಅವರು ದೂರಿದ್ದಾರೆ.
ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ವಕೀಲ ಎಲ್.ರಮೇಶ್‌ನಾಯಕ್ ಅವರು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಕೋರ್ಟ್ ಮೆಟ್ಟಿಲು ಏರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಕೋಡಲೇ ಎಚ್ಚೆತ್ತುಕೊಂಡ ವಿಭಾಗೀಯ ನಿಯಂತ್ರಣಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು – ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ಎಲ್ಲಾ ವೇಗದೂತ, ಸಾಮಾನ್ಯ ಸಾರಿಗೆಗಳು ಹೋಗುವಾಗ, ಬರುವಾಗ ಕಡ್ಡಾಯವಾಗಿ ನಿಲುಗಡೆ ನೀಡುವಂತೆ ಸಂಬಂಧಪಟ್ಟ ಎಲ್ಲಾ ಚಾಲಕ, ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಿ ಅಗತ್ಯ ಕ್ರಮ ಕೈಗೊಂಡು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ವಹಿಸಿಕೊಂಡು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ವಕೀಲ ಎಲ್.ರಮೇಶ್‌ನಾಯಕ್ ಅವರ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿವೆ.
ಸಾರಿಗೆ ಬಸ್ ನಿಲುಗಡೆಗೆ ಆದೇಶ
Get real time updates directly on you device, subscribe now.
Next Post
Comments are closed.