
ಬೆಂಗಳೂರು: ವಸತಿ ಇಲಾಖೆಯಲ್ಲಿ ನಡೆದಿರುವ ಬ್ರಹ್ಮಾಟಡ ಭ್ರಷ್ಟಾಚಾರ ಹಸಿಯಾಗಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಾಮರಾಜಪೇಟೆಯಲ್ಲಿ ನಡೆದಿರುವ ಕಾಮಗರಿಗೆ ಎರಡೆರೆಡು ಬಾರಿ ಬಿಲ್ ಪಾವತಿಯಾಗಿರೋ ಬಗ್ಗೆ ಬಿಜೆಪಿ ನಾಯಕ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಸಚಿವ ಜಮೀರ್ ಅಹ್ಮದ್ ಪ್ರತಿನಿಧಿಸುತ್ತಿರುವ ಚಾಮರಾಜಪೇಟೆಯಲ್ಲಿ ಯಾವುದೇ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಅಂದರೆ 55 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿಸಿಕೊಂಡಿರುವ ವಂಚನೆ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.2020 ರಿಂದ 2022 ರವರೆಗೆ ಹಲವು ಕಾಮಗಾರಿಗಳು ನಡೆದಿತ್ತು. ಈ ಸಂಬಂಧ ಗುತ್ತಿಗೆದಾರರು ಈಗಾಗ್ಲೇ ಬಿಲ್ ಮಂಜೂರು ಮಾಡಿಸಿಕೊಂಡಿದ್ದು, ಎರಡೂವರೆ ವರ್ಷಗಳ ನಂತರ 2024-25 ರಲ್ಲಿ ಮತ್ತೊಮ್ಮೆ ಅದೇ 47 ಕಾಮಗಾರಿಗಳಿಗೆ, ಅದೇ 19 ಮಂದಿ ವಂಚಕ ಗುತ್ತಿಗೆದಾರರಿಗೆ 27,66,00,000 ರೂಪಾಯಿಗಳನ್ನು ಎರಡನೇ ಸಲ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಒಂದೇ ಕಾಮಗಾರಿಗೆ ಎರಡು ಬಿಲ್- ಜಮೀರ್ ವಿರುದ್ಧ ದೂರು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


