
ತಿಪಟೂರು: ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಸಂದ್ರ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇದೇ ತಿಂಗಳು 5 ನೇ ತಾರೀಕು ದೇವಸ್ಥಾನದ ಬೇಗ ಮುರಿದು ಚಾಮುಂಡೇಶ್ವರಿ ವಿಗ್ರಹದ ಮೇಲಿದ್ದ ಒಡವೆ ಮತ್ತು ಹುಂಡಿಯ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ಕೆ.ಬಿ.ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಪತ್ತೆ ಹಚ್ಚಲು ತುಮಕೂರು ಜಿಲ್ಲಾ ಪೊಲೀಸ್ ಅಧಿಕ್ಷಕರ ಆದೇಶದ ಮೇರೆಗೆ ಜಿಲ್ಲಾ ಪೊಲೀಸರು ಮತ್ತು ತಿಪಟೂರು ಉಪ ವಿಭಾಗದ ಡಿ ಎಸ್ ಪಿ ವಿನಾಯಕ ಶೆಟ್ಟಿಗೇರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ಕಿಬ್ಬನಹಳ್ಳಿ ಪಿ ಎ ಎಸ್ ಐ ಮಹೇಶ್ ಮಾಳಿ, ಪೊಲೀಸ್ ಸಿಬ್ಬಂದಿ ಚೇತನ್ ಕುಮಾರ್, ಗೋಪಾಲ್ ನೇತೃತ್ವದ ತಂಡ ರಚಿಸಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಆರೋಪಿ ಕಾಂತೇಶ್ ನನ್ನು ಬಂಧಿಸಲಾಗಿದೆ, ಈತನ ವಿರುದ್ಧ 5 ಠಾಣೆಗಳಲ್ಲಿ ಪ್ರಕರಣಗಳಿವೆ, ಆರೋಪಿಯಿಂದ ಲಕ್ಷಾಂತರ ಬೆಲೆ ಬಾಳುವ ಒಡವೆ ಒಡವೆ, ಕೃತ್ಯಕ್ಕೆ ಬಳಸಿದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದೇವಸ್ಥಾನದಲ್ಲಿ ಕಳ್ಳತನ- ಆರೋಪಿ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


