
ಕುಣಿಗಲ್: ಗಾಂಜಾ ಬೆಳೆದು ಸೊಪ್ಪನ್ನು ಕಿತ್ತು ಪೂಜೆ ಉದ್ದೇಶಕ್ಕೆ ಬಳಸುವುದಾಗಿ ಹೇಳುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣದ ಮೇರೆಗೆ ಪೊಲೀಸರು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುವಕರಿಬ್ಬರು ಗಾಂಜಾ ಸೊಪ್ಪನ್ನು ಕಿತ್ತು ಸಂಭಾಷಣೆ ನಡೆಸುತ್ತಿರುವ ಬಗ್ಗೆ ವೀಡಿಯೋ ವೈರಲ್ ಆಗಿತ್ತು, ಈ ಬಗ್ಗೆ ಪರಿಶೀಲನೆ ನಡೆಸಿದಾಗ ಸದರಿ ಕೃತ್ಯ ಮಡಿಕೆಹಳ್ಳಿ ಗ್ರಾಮದ ವ್ಯಾಪ್ತಿಗೆ ಸೇರಿದ್ದು ಎನ್ನಲಾಗಿದ್ದು ಸಂಭಾಷಣೆ ನಡೆಸುತ್ತಿದ್ದ ವ್ಯಕ್ತಿಗಳು ಚಂದ್ರಣ್ಣ, ಪ್ರತಾಪ್ ಎನ್ನಲಾಗಿದೆ, ಈ ಬಗ್ಗೆ ಗುಪ್ತ ಮಾಹಿತಿ ಸಿಬ್ಬಂದಿ ನಟರಾಜ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗಾಂಜಾ ಸೊಪ್ಪು ಕಿತ್ತು ವೀಡಿಯೀ- ಇಬ್ಬರ ಮೇಲೆ ಕೇಸ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


