
ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು.ಈ ವೇಳೆ ಕ್ರೀಡಾಂಗಣದ ಬಳಿಕ ಜನಸಂದಣಿ ಹೆಚ್ಚಿದ್ದ ಕಾರಣ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು.ಈ ಪೈಕಿ ದಿವ್ಯಾಂಶಿ ಎಂಬ ಯುವತಿ ಸಹ ಸೇರಿದ್ದಳು.
ನೆಚ್ಚಿನ ತಂಡದ ಗೆಲುವನ್ನು ಸಂಭ್ರಮಿಸಲ ಬಂದಿದ ದಿವ್ಯಾಂಶಿ ಕಾಲ್ತುಳಿತಕ್ಕೆ ಬಲಿಯಾಗಿದ್ದಳು. ಇದೀಗ ದಿವ್ಯಾಂಶಿ ತಾಯಿ ಮಾಧ್ಯಮದ ಮುಂದೆ ಬಂದು ತನ್ನ ಮಗಳ ಕಿವಿಯಲ್ಲಿದ್ದ ಓಲೆ ಕಳುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.ಅಂದಹಾಗೆ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದ್ದು, ಮಗಳ ಮೃತದೇಹವನ್ನು ಒಳಗೆ ತೆಗೆದುಕೊಂಡು ಹೋಗಬೇಕಾದರೆ ಓಲೆ ಇತ್ತು, ಆದರೆ ಮೃತದೇಹ ಹಸ್ತಾಂತರಿಸಿದಾಗ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾಗಿ ಹೇಳಿದರು.
ದಿವ್ಯಾಂಶಿ ಓಲೆ ಕಳವು- ತಾಯಿಯಿಂದ ದೂರು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


