
ವೈ.ಎನ್.ಹೊಸಕೋಟೆ: ತಡರಾತ್ರಿ ನೀಲಮ್ಮನಹಳ್ಳಿ ಗ್ರಾಮದ ರೈತರ ಜಮೀನುಗಳಲ್ಲಿ ಲಕ್ಷಾಂತರ ರೂ. ಬೆಲೆಯ ಕೊಳವೆಬಾವಿ ಕೇಬಲ್ ಕಳುವಾಗಿರುವ ಘಟನೆ ನಡೆದಿದೆ.
ಎಂದಿನಂತೆ ಸೋಮವಾರ ಸರ್ವೆ ನಂಬರ್ 109, 107, 341, 342 ಈ ಜಮೀನುಗಳಿಗೆ ಸಂಬಂಧಿಸಿದ ರೈತರಾದ ರಮೇಶ್, ರಾಮಾಂಜಿ, ಶ್ರೀನಿವಾಸ್, ಆರ್.ವಿ.ನಾಗರಾಜು, ರೋಹಿತ್, ಶಿವಣ್ಣ ರಾತ್ರಿ ನೀರು ಹಾಯಿಸಿ ಮನೆಗೆ ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ ಜಮೀನುಗಳಲ್ಲಿ ನೋಡಿದಾಗ ಈ ಎಲ್ಲಾ ಸರ್ವೆ ನಂಬರುಗಳಲ್ಲಿದ್ದ ಕೇಬಲ್ ಗಳು ಕಾಣೆಯಾಗಿವೆ, ಇದೇ ರೀತಿ ಈ ಹಿಂದೆಯೂ ಈ ಜಮೀನುಗಳಲ್ಲಿ ಕೃಷಿ ಪರಿಕರಗಳು ಮತ್ತು ವಿದ್ಯುತ್ ಪರಿಕರಗಳು ಕಾಣೆಯಾಗಿದ್ದು, ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು.
ಬಿ.ಹೊಸಹಳ್ಳಿ ಗ್ರಾಮದ ತಿಪ್ಪಯ್ಯನದುರ್ಗ ರಸ್ತೆಗೆ ಹೊಂದಿಕೊಂಡಿರುವ ಚೌಡ್ಲು ಮಾರಮ್ಮ ದೇವಸ್ಥಾನದಲ್ಲಿ ಒಂದು ಬೆಳ್ಳಿಯ ಖಡ್ಗ ಮತ್ತು ದೇವಿಯ ಕೊರಳಲ್ಲಿದ್ದ ಬಂಗಾರದ ಎರಡು ತಾಳಿಗಳನ್ನು ಕಳ್ಳರು ಕಟರ್ ಬಳಿಸಿ ತುಂಡರಿಸಿ ತೆಗೆದುಕೊಂಡು ಹೋಗಿದ್ದಾರೆ, ಮರಿದಾಸನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಅಕ್ಕಮ್ಮದೇವಿ ಗುಡಿಯಲ್ಲಿದ್ದ 8 ಬೆಳ್ಳಿ ಛತ್ರಿಗಳು ಒಂದು ಒಂದು ಹೊಂಬಾಳೆ ಗುಚ್ಚನ್ನು ಕೈಚಳಕ ತೋರಿಸಿ ಬೀಗ ಹೊಡೆದು ಕದ್ದಿದ್ದಾರೆ.
ಇತ್ತೀಚೆಗೆ ಈ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ವಿಫಲವಾಗಿರುವುದು ಕಂಡು ಬರುತ್ತಿದೆ ಎಂದು ಸಾರ್ವಜನಿಕರಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಸರಣಿ ಕಳವು- ಬೆಚ್ಚಿಬಿದ್ದ ನಾಗರಿಕರು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


