
ಬೆಂಗಳೂರು: ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಭೌತಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ನೆಲ ಅಗೆದು ಅಸ್ತಿಪಂಜರ ಹುಡುಕಾಟದಲ್ಲಿ ತೊಡಗಿದೆ, ಈಗಾಗಲೇ ಪಾಯಿಂಟ್ ನಂಬರ್ ಆರಲ್ಲಿ ಮನುಷ್ಯನ ದೇಹದ ಹಲವು ಮೂಳೆಗಳು ಸಿಕ್ಕಿದ್ದು ಅಧಿಕಾರಿಗಳು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಇದರ ಬೆನ್ನಲ್ಲೇ ದೂರುದಾರ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದು, ನಾನು ಹದಿಹರೆಯದ ಹುಡುಗಿಯ ಮೃತ ದೇಹ ನೋಡಿದ್ದೆ. ವಯಸ್ಸು 12 ರಿಂದ 15 ವರ್ಷಗಳ ನಡುವೆ ಇತ್ತು, ಆ ಬಾಲಕಿ ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಅವಳ ಲಂಗ ಮತ್ತು ಒಳಉಡುಪು ಇರಲಿಲ್ಲ, ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣ ಕಾಣಿಸುತ್ತಿತ್ತು.
ಅವಳ ಕುತ್ತಿಗೆ ಹಿಸುಕಿರುವ ಗುರುತುಗಳು ಸಹ ಇದ್ದವು. ನನಗೆ ಗುಂಡಿ ಅಗೆಯಲು ನಿರ್ದೇಶನ ನೀಡಿದ್ದರು. ಅವಳ ಶಾಲಾ ಬ್ಯಾಗ್ ನೊಂದಿಗೆ ಹೂಳಲು ನನಗೆ ಹೇಳಿದ್ದರು.ಆ ಸನ್ನಿವೇಶ ನನಗೆ ಇಂದಿಗೂ ಮಾಸಿಲ್ಲ ಎಂದು ತಿಳಿಸಿದ್ದಾನೆ.
ದೂರುದಾರನ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಳಿಸಿದ ಎಸ್ ಐಟಿ ತಂಡ ಶಾಲಾ ಬಾಲಕಿ ನಾಪತ್ತೆ ಬಗ್ಗೆ ಎಸ್ ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಹುಡುಗಿ ಮೃತ ದೇಹ ನೋಡಿದ್ದೆ ಎಂದ ಮಾಸ್ಕ್ ಮ್ಯಾನ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


