
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊಸ ಸೇತುವೆ ಮೇಲೆ ಸ್ಕೂಟಿಯಲ್ಲಿ ಸವಾರಿ ಮಾಡಿದ್ದರು. ಹೀಗೆ ಡಿಸಿಎಂ ಡಿಕೆಶಿ ಸವಾರಿ ಮಾಡಿದ್ದಂತ ಬೈಕ್ ಮೇಲೆ 34 ಕೇಸ್ ಗಳಿದ್ದರೆ, ಅದರ ದಂಡದ ಮೊತ್ತ ರೂ.18,500 ಆಗಿದೆ, ಅದನ್ನು ಕಟ್ಟದೇ ಬೈಕ್ ಮಾಲೀಕ ಬಾಕಿ ಉಳಿಸಿಕೊಂಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಬೈರತಿ ಸುರೇಶ್ ಜೊತೆಗೆ ಸ್ಕೂಟಿಯಲ್ಲಿ ಸಂಚರಿಸಿದ್ದು ಭಾರೀ ಸದ್ದು ಮಾಡಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಓಡಿಸಿದ್ದಂತ ಬೈಕ್ ನಂಬರ್ ಆಧಾರದ ಮೇಲೆ ಸಂಚಾರ ನಿಯಮ ಉಲ್ಲಂಘನೆ, ದಂಡವನ್ನು ಪರಿಶೀಲಿಸಿದಾಗ ಇದು ಬಹಿರಂಗಗೊಂಡಿದೆ.ಡಿಸಿಎಂ ಡಿ.ಕೆ.ಶಿವಕುಮಾರ್ ಚಲಾಯಿಸಿದಂತ ಬೈಕ್ ಮೇಲೆ 34 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿವೆ. ಇದರ ದಂಡದ ಮೊತ್ತ ರೂ.18,500 ಆಗಿದೆ ಎಂಬುದಾಗಿ ಸಂಚಾರ ಪೊಲೀಸ್ ಇಲಾಖೆಯ ದತ್ತಾಂಶದ ಮಾಹಿತಿಯಿಂದ ತಿಳಿದು ಬಂದಿದೆ.
ಡಿಕೆಶಿ ಓಡಿಸಿದ್ದ ಸ್ಕೂಟಿ ಮೇಲೆ 34 ಕೇಸ್!

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


