
ಗುಬ್ಬಿ: ಗುಬ್ಬಿ ಪ್ರಾದೇಶಿಕ ವಲಯದ ಮಾರಶೆಟ್ಟಿಹಳ್ಳಿ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ 02 ಶ್ರೀಗಂಧದ ಮರಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದವರನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಆರೋಪಿಗಳು ತುಮಕೂರು ತಾಲ್ಲೂಕು, ಕೋರಾ ಹೋಬಳಿ ಗಂಗನಾಲ ಗ್ರಾಮ ವಾಸಿಗಳಾಗಿದ್ದು, 03 ಜನ ಆರೋಪಿಗಳ ಪೈಕಿ ಸುರೇಶ್.ಜಿ.ಎಸ್. ನನ್ನು ಅರಣ್ಯ ಸಿಬ್ಬಂದಿ ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಳಿದ ಗುಂಡ ಹಾಗೂ ವೇಲು ಎಂಬುವವನು ನಾಪತ್ತೆಯಾಗಿದ್ದು ಸದರಿ ಅರೋಪಿಗಳನ್ನು ಸೆರೆಹಿಡಿಯಲು ಬಲೆ ಬೀಸಲಾಗಿದೆ, ಸದರಿ ಅಪರಾಧಿಗಳಿಂದ ಕೃತ್ಯಕ್ಕೆ ಬಳಕೆಯಾದ ದ್ವಿಚಕ್ರ ವಾಹನ ಶ್ರೀಗಂಧದ 06 ತುಂಡು, 03 ಮಚ್ಚು, 06 ಸಾಮಿಲ್ ಗರಗಸ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ .
ಈ ಕಾರ್ಯಾಚರಣೆಯನ್ನು ತುಮಕೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ನೇತೃತ್ವದಲ್ಲಿ ದೊಡ್ಡಗುಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ಗಸ್ತು ಅರಣ್ಯಪಾಲಕರಾದ ಶಶಿಕುಮಾರ್, ಶಂಕರ, ರವಿ ಹಾಗೂ ಅರಣ್ಯ ವೀಕ್ಷಕ ಷಣ್ಮುಖ, ಗೋಪಿ, ಬಸವರಾಜು, ಚಾಲಕ ಶೈಲೇಶ್ ಭಾಗವಹಿಸಿದ್ದರು.
ಶ್ರೀಗಂಧ ಕಳ್ಳ ಸಾಗಾಣೆ- ಆರೋಪಿ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


