![]()
ಬೆಂಗಳೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬೃಹತ್ ಗಾತ್ರದ ಅರಳಿಮರ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ ಸೋಲದೇವನಹಳ್ಳಿ ಪೋಲಿಸ್ ಠಾಣೆ ಸಮೀಪ ನಡೆದಿದೆ.
ಮೃತ ಯುವತಿಯನ್ನ ಹೆಬ್ಬಾಳ ನಿವಾಸಿ ಕೀರ್ತನಾ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಮತ್ತೋರ್ವ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮರದ ಕೆಳಗೆ ಪ್ರತಿದಿನ ಪೋಲಿಸರು ನಿಲ್ಲುತ್ತಿದ್ದರಂತೆ. ಮರ ಬಿದ್ದ ಶಬ್ದ ಕೇಳಿ ಪೊಲೀಸರು ಓಡೋಡಿ ಬಂದಿದ್ದು, ಸ್ಥಳೀಯರ ಜೊತೆ ಗಾಯಾಳು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಮರ ಬಿದ್ದ ಪರಿಣಾಮ ಕರೆಂಟ್ ಲೈನ್ ಗಳು ಕಟ್ ಆಗಿದ್ದು, ತಕ್ಷಣ ಬೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೀರ್ತನಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಯುವತಿ ಸಾವು
ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


