
ಬೆಂಗಳೂರು: ಸ್ನೇಹಿತೆಯ ಸಾವಿನಿಂದ ಮನನೊಂದ ಬಾಲಕಿಯೊಬ್ಬಳು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಬೆಂಗಳೂರಲ್ಲಿ 9ನೇ ತರಗತಿ ಬಾಲಕಿ ಸೂಸೈಡ್ ಮಾಡಿಕೊಂಡಿದ್ದಾಳೆ. 16 ವರ್ಷದ ಶರ್ಮಿಳಾ ಆತ್ಮಹತ್ಯೆಗೆ ಶರಣಾದ ಬಾಲಕಿಯಾಗಿದ್ದಾಳೆ. ಕಲಾಸಿಪಾಳ್ಯದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
10ನೇ ತರಗತಿ ಗೆಳತಿಯೊಂದಿಗೆ ಶರ್ಮಿಳಾಗೆ ತುಂಬಾನೇ ಸ್ನೇಹವಾಗಿತ್ತು. ಮತ ಗೆಳತಿ ಮತ್ತು ಶರ್ಮಿಳಾ ಇಬ್ಬರೂ ಆತ್ಮೀಯರಾಗಿದ್ದರು. 3 ತಿಂಗಳ ಹಿಂದೆ ಗೆಳತಿ ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಯ ಸಾವಿನಿಂದ ಮನನೊಂದು ನಿನ್ನೆ ಶರ್ಮಿಳಾ ಮನೆಯಲ್ಲಿ ನೇಣಿಗೆ ಶರಣಾಗಿರುವಂತ ಶಂಕೆ ವ್ಯಕ್ತವಾಗಿದೆ.
ಸ್ನೇಹಿತೆಯ ಸಾವಿನಿಂದ ಮನನೊಂದು ಬಾಲಕಿ ಆತ್ಮಹತ್ಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


