
ಬೆಂಗಳೂರು: ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಆಡಳಿತ ನಿಷ್ಕ್ರಿಯತೆಯಿಂದ ಜೈಲುಗಳು ಕಳ್ಳಭಟ್ಟಿ ತಯಾರಿಕಾ ಫ್ಯಾಕ್ಟರಿಗಳಾಗಿ ಮಾರ್ಪಟ್ಟಿವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ತಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ಕಾರಾಗ್ರಹಗಳು ಕಳ್ಳಭಟ್ಟಿ ಕಾರ್ಖಾನೆಗಳಾಗಿ ಮಾರ್ಪಟ್ಟಿರುವ ವಿಷಯ ತಮಗೆ ಗೊತ್ತಿದೆಯೋ ಅಥವಾ ಎಂದಿನಂತೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತೀರೋ? ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಕಡೆ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿಸಿಕೊಂಡಿದೆ. ಇದರ ನಡುವೆ ಐಟಿ ಬಿಟಿ ಕಂಪನಿಗಳಿಗೆ ಬೈ ಬೈ, ಕಳ್ಳಭಟ್ಟಿ ಫ್ಯಾಕ್ಟರಿಗಳಿಗೆ ಜೈ ಜೈ ಎಂದು ಅಶೋಕ್ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜೈಲುಗಳಲ್ಲಿ ಕಳ್ಳಭಟ್ಟಿ ತಯಾರು- ಆರ್.ಅಶೋಕ್ ಕಿಡಿ
ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


