
ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ.
ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ ತೆರಳಿದ್ದ ಗಾನವಿ ಡಿ.25ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಸೂರಜ್ ಮನೆಯವರಿಂದ ಯಾವುದೇ ಕಿರುಕುಳವಾಗಿಲ್ಲ. ಮಾನಸಿಕ ವೈದ್ಯರೊಂದಿಗೆ ಸೂರಜ್ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಮಾನಸಿಕ, ವೈದ್ಯಕೀಯ ಕಾರಣಗಳಿಲ್ಲ. ಹೀಗಿದ್ದರೂ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಅಪಮಾನ, ನಿಂದನೆ ತಡೆಯದೇ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರ್ಟ್ ಗೆ ಆಗ್ರಹಿಸಿದ್ದಾರೆ.
ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ನಿನ್ನೆಯಷ್ಟೇ ಹೊಸ ಟ್ವಿಸ್ಟ್ ಸಿಕ್ಕಿತ್ತು. ಗಾನವಿ ಈ ಹಿಂದೆ ಹರ್ಷ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ ಬೇಕು ಎಂದು ನಿರ್ದರಿಸಿದ್ದಳ್ಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್ ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್ ಗೆ ಹೋದಾಗ ಹರ್ಷ ಜೊತೆಗಿನ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್ ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್ ಗೆ ತೆರಳಿದ್ದ ಅವರು ಅರ್ಧಕ್ಕೆ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ತವರಿಗೆ ತೆರಳಿದ್ದ ಆಕೆ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಆರೋಪವನ್ನು ನಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿದೆ ಎಂದು ಸೂರಜ್ ಬಾವ ರಾಜ್ ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


