
ಬೆಂಗಳೂರು: ನಗರದ ಮಾಚನಹಳ್ಳಿ ಗ್ರಾಮದ ಸಮೀಪ 8 ಎಕರೆ ಭೂಮಿ ಕಬಳಿಸಿದ್ದ ಎಂಬ ಆರೋಪ ಎದುರಿಸುತ್ತಿದ್ದ ನೆಲಮಂಗಲದ ಹೆಡ್ ಕಾನ್ ಸ್ಟೆಬಲ್ ನನ್ನು ಅಮಾನತು ಮಾಡಲಾಗಿದೆ. ನೆಲಮಂಗಲ ತಾಲೂಕಿನ ಮಾಚನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ 8 ಎಕರೆ ಭೂಮಿ ಕಬಳಿಸಿದ್ದ ಮುಖ್ಯ ಪೇದೆ ಗಿರಿಜೇಶ್ ಎಂಬಾತ ಸೇರಿ ಒಟ್ಟು ಆರು ಜನರ ವಿರುದ್ಧ ಡಾಬಸ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದ್ರೆ ದೂರು ದಾಖಲಾಗಿ 20 ದಿನಗಳಾದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಆದ್ರೆ ಇದೀಗ ಆರೋಪಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರಿ ಸೇವೆಯಲ್ಲಿದ್ದು ಅಕ್ರಮ ಮಾಡಿರುವ ಹಿನ್ನೆಲೆ ಮುಖ್ಯ ಪೇದೆಯನ್ನು ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬ ಆದೇಶ ಹೊರಡಿಸಿದ್ದಾರೆ. ಮತ್ತೊಂದೆಡೆ ನೆಲಮಂಗಲ ಸಬ್ರಿಜಿಸ್ಟ್ರಾರ್ ಸತೀಶ್ ಕುಮಾರ್ ಕೇಸ್ ದಾಖಲಾದ ಬಳಿಕ ಕಚೇರಿಗೆ ಹಾಜರಾಗದೆ ತಲೆಮರಿಸಿಕೊಂಡಿದ್ದಾರೆ.
ಭೂಮಿ ಕಬಳಿಸಿದ್ದ ಆರೋಪ- ಹೆಡ್ ಕಾನ್ ಸ್ಟೆಬಲ್ ಅಮಾನತು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


