
ಕೋಲಾರ: ಕೆರೆಯಲ್ಲಿ ಈಜಲು ಹೋಗಿದ್ದ ಅಣ್ಣ-ತಮ್ಮ ಇಬ್ಬರೂ ನೀರುಪಾಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿ ಬಳಿ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ ಯುವಕರನ್ನು ರೋಣೂರು ಹೋಬಳಿ ವ್ಯಾಪ್ತಿಯ ಚಾಂಪಲ್ಲಿ ಗ್ರಾಮದ ನಿವಾಸಿಗಳಾದ ನರೇಂದ್ರ (25) ಹಾಗೂ ಚಂದನ್ (23) ಎಂದು ಗುರುತಿಸಲಾಗಿದೆ. ಪಚ್ಚರಮಾಕಲಹಳ್ಳಿಗೆ ಗಾರೆ ಕೆಲಸಕ್ಕೆ ತೆರಳಿದ್ದ ಯುವಕರು ಬಿಸಿಲಿನ ತಾಪಮಾನದಿಂದಾಗಿ ಸಮೀಪದ ಕೆರೆಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನ ಆಳ ಅಂದಾಜಿಸಲು ಸಾಧ್ಯವಾಗದೆ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೆರೆಯಲ್ಲಿ ಈಜಲು ತೆರಳಿದ್ದ ಅಣ್ಣ-ತಮ್ಮ ನೀರುಪಾಲು








