
ಬೆಂಗಳೂರು: ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ರಾಜ್ಯದತ್ತ ಗಮನ ಹರಿಸಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಾಯಕತ್ವ ವಿಚಾರವಾಗಿ ಹೈಕಮಾಂಡ್ ಮೌನದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಪುನಾರಚನೆ ಬಗ್ಗೆ ತೀರ್ಮಾನಿಸಲು ಈ ತಿಂಗಳ ಅಂತ್ಯದವರಗೆ ಸಮಯ ಇದೆ. ಮೊದಲು ಕೇರಳ ಸಿಎಂ ಇತ್ಯರ್ಥ ಆಗಬೇಕು. ಇನ್ನೂ ಸ್ವಲ್ಪ ದಿನ ಕಾಯಬೇಕು ಎಂದು ತಿಳಿಸಿದರು.
ಕೇರಳ ಸಿಎಂ ಆಯ್ಕೆ ನಂತರ ರಾಜ್ಯದತ್ತ ಗಮನ: ಜಾರಕಿಹೊಳಿ








