ರೇಬಿಸ್ ರೋಗದಿಂದ 17 ಜನರ ಸಾವು
ಬೆಂಗಳೂರು: ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು, ಬೆಂಗಳೂರಿನಲ್ಲಿ ರೇಬೀಸ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಳೆದ ಆರು ತಿಂಗಳಲ್ಲಿ 17 ಜನರು ರೇಬೀಸ್ ನಿಂದ ಮೃತಪಟ್ಟಿದ್ದಾರೆ. ನಾಯಿ ಕಡಿತದ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.ರೇಬೀಸ್ ನ…
ಅಪಹರಿಸಿ ಉಪನ್ಯಾಸಕನ ಪುತ್ರನ ಕೊಲೆ
ಬೆಂಗಳೂರು: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರ ಪುತ್ರನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಅರಕೆರೆಯ ವಿಜಯ ಬ್ಯಾಂಕ್ ಕಾಲೋನಿಯ ಜೆ.ಸಿ.ಅಶ್ವತ್ಥ್ ಅವರ ಪುತ್ರ ನಿಶ್ಚಿತ್ (13) ಹತ್ಯೆಯಾದ ಬಾಲಕ.13 ವರ್ಷದ ಬಾಲಕ ನಿಶ್ಚಿತ್ ನನ್ನು…
5 ಜನರಿಗೆ ದಾಳಿ ನಡೆಸಿದ್ದ ಚಿರತೆ ಸೆರೆ
ತುರುವೇಕೆರೆ: ತಾಲೂಕಿನ ಗೋಣಿ ತುಮಕೂರು ಬಳಿಯಲ್ಲಿ 5 ಜನರಿಗೆ ದಾಳಿ ನಡೆಸಿದ್ದ ತೋಟದ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಬುಧವಾರ ರಾತ್ರಿಯೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾದರು. ಬುಧವಾರ ಸುಮಾರು ಐದು ಜನರಿಗೆ ದಾಳಿ ನಡೆಸಿದ್ದ ಚಿರತೆಯನ್ನು ರೈತರು ಧೈರ್ಯ ಮಾಡಿ…
ಶವಗಳ ಹೂತಿಟ್ಟ ಪ್ರಕರಣ- 12 ಮೂಳೆ ಪತ್ತೆ
ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ 12 ಭಾಗಗಳ ಜೊತೆಗೆ ಒಳ ಉಡುಪಿನ ತುಂಡು ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ. 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2…
ಮಹಿಳೆ ಸಾವು- ಪ್ರಕರಣ ದಾಖಲು
ಕುಣಿಗಲ್: ಚಿಕಿತ್ಸೆಗೆಂದು ಪಟ್ಟಣದ ಖಾಸಗಿ ಆಸ್ಪತ್ರೆಗೆ ಬಂದ ಮಹಿಳೆ ಚಿಕಿತ್ಸೆ ಪಡೆದ ನಂತರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಗಿ ಹೆಚ್ಚಿನ ಚಿಕಿತ್ಸೆಗೆ ಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಮೃತಪಟ್ಟಿದ್ದು ಮಹಿಳೆಗೆ ಸಾವಿಗೆ ಖಾಸಗಿ ಆಸ್ಪತ್ರೆಯವರೆ ಕಾರಣ ಎಂದು ಕುಟುಂಬದವರು ಆರೋಪಿಸಿ ದೂರು ನೀಡಿದ್ದು…
ಬೈಕ್ ನಿಂದ ಕರ್ಕಶ ಶಬ್ದ- ಬಿತ್ತು ದಂಡ
ತಿಪಟೂರು: ನಗರದಲ್ಲಿ ಯಾವುದೇ ದಾಖಲೆ ಮತ್ತು ನಂಬರ್ ಪ್ಲೇಟ್ ಇಲ್ಲದೆ ಕರ್ಕಶ ಶಬ್ದದೊಂದಿಗೆ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ವೃದ್ಧರಿಗೆ ತೊಂದರೆ ನೀಡಿ ಚಲಾಯಿಸುತ್ತಿದ್ದ ಬೈಕ್ ಸವಾರ ಜತಿನ್ ರಾಜ್ ಬಿನ್ ಸುರೇಶ್ ಎಂಬುವರನ್ನು ನಗರ ಠಾಣೆ ಪೊಲೀಸರು ದ್ವಿಚಕ್ರ ವಾಹನ ಸಮೇತ…
ಬಾಲಕಿಯ ಅತ್ಯಾಚಾರಗೈದ ಅಪರಾಧಿಗೆ 20 ವರ್ಷ ದಂಡಸಮೇತ ಕಠಿಣ ಜೈಲುಶಿಕ್ಷೆ
ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭವತಿಯನ್ನಾಗಿಸಿದ ಆರೋಪಿಯನ್ನು ’ದೋಷಿ’ ಎಂದು ಘೋಷಿಸಿ, 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಪೋಕ್ಸೊನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ದೋಷಿಯು ಮೂರು ಮಕ್ಕಳ ತಂದೆಯಾಗಿದ್ದು, ಬಾಲಕಿಯ ಸಂಬಂಧಿಯೂ…
ಮಿಸ್ ಫೈರ್ಯುವತಿ ಕಿಡ್ನಿ ಡಮರ್
ಬೆಂಗಳೂರು: ಪಿಸ್ತೂಲ್ ನಿಂದ ಮಿಸ್ ಫೈರ್ ಆದ ಗುಂಡು ತಗುಲಿ ಯುವತಿಯ ಒಂದು ಕಿಡ್ನಿಗೆ ತೀವ್ರ ಹಾನಿಯಾದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಚಲ್ (32) ಎಂಬವರು ಕಿಡ್ನಿ ಕಳೆದುಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ…
ಕಸದ ವಾಹನ ಹರಿದು 3 ವರ್ಷದ ಮಗು ಸಾವು
ಬಳ್ಳಾರಿ: ರಸ್ತೆಬದಿ ಆಟ ಆಡುತ್ತಿದ್ದ ವೇಳೆ ಘೋರ ದುರಂತ ಸಂಭವಿಸಿದ್ದು, ಕಸದ ವಾಹನ ಹರಿದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ ಟಾಟಾ ಏಸ್ ವಾಹನ ಹರಿದು ಶೈಲಜಾ- ಸಮರ…
ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ ಮಣ್ಣು ತಿಂದು ಪ್ರತಿಭಟನೆ ನಡೆಸಿದ ರೈತ
ಕೊಪ್ಪಳ: ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಎಲ್ಲಿಯೂ ರಸಗೊಬ್ಬರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನೊಬ್ಬ ಮಣ್ಣು ತಿಂದು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಣಿಕೇರಿ ತಾಂಡಾದ ಚಂದ್ರಪ್ಪ ಮತ್ತು ನೂರಾರು ರೈತರು ಯೂರಿಯಾ ಖರೀದಿಸಲು ಕೊಪ್ಪಳ ಎಪಿಎಂಸಿಯಲ್ಲಿ ಸಾಲುಗಟ್ಟಿ…


