ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಮಗ
ಬೆಂಗಳೂರು: ಶಿಸ್ತಿನಿಂದಿರು ಅಂತಾ ಹೇಳಿದ್ದಕ್ಕೆ ಮಗನೇ ತನ್ನ ತಂದೆ ಭೀಕರವಾಗಿ ಹತ್ಯೆಗೈದ ಘಟನೆ ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 2:30ರ ಸುಮಾರಿಗೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಇಸ್ಲಾಂ ಅರಬ್ (47) ಕೊಲೆಗೀಡಾದ ತಂದೆ.…
ವಿಂಗ್ ಕಮಾಂಡರ್ ಮೇಲೆ ಹಲ್ಲೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ವಿಂಗ್ ಕಮಾಂಡರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಏರ್ ಪೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಶಿಲಾದಿತ್ಯ ಬೋಸ್ ಹಲ್ಲೆಗೊಳಗಾದ ವಿಂಗ್ ಕಮಾಂಡರ್. ಪತ್ನಿ ಜೊತೆ ಏರ್ ಪೋರ್ಟ್ ಗೆ…
ಸರ್ಕಾರಿ ಗೌರವದೊಂದಿಗೆ ಓಂ ಪ್ರಕಾಶ್ ಅಂತ್ಯಕ್ರಿಯೆ
ಬೆಂಗಳೂರು: ಆಸ್ತಿ ವಿಚಾರವಾಗಿ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಿವಾಸದಲ್ಲಿ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಪತ್ನಿ ಪಲ್ಲವಿ ಅವರಿಂದ ಭೀಕರವಾಗಿ ಕೊಲೆಯಾಗಿದ್ದರು ಇದೀಗ ಪಂಚಭೂತಗಳಲ್ಲಿ ಓಂ ಪ್ರಕಾಶ್ ಅವರು ಲೀನವಾದರು. ಬೆಂಗಳೂರಿನ ವಿಲ್ಸನ್…
ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ- ಸತ್ಯ ಬಯಲು
ಬೆಳಗಾವಿ: ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಹಿಂದೆ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಬಿಸಿಎ ಓದುತ್ತಿದ್ದ…
ಸಾಸಲು ಗ್ರಾಮದ ಬಳಿ ದಾವಣಗೆರೆ ಮಣಿಕಂಠ ಹತ್ಯೆ
ದಾವಣಗೆರೆ: ಕಲ್ಲಿನಿಂದ ತಲೆಗೆ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೂಲತಃ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ದಾವಣಗೆರೆ ನಿವಾಸಿ ಮಣಿಕಂಠ (34) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶುಕ್ರವಾರ…
ಶಿಶುವಿನ ಶವ ಪತ್ತೆ- ಯುವಕ ಬಂಧನ
ಬೆಂಗಳೂರು: ಯಲಹಂಕದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಏ.2 ರಂದು ಗಾಂಧಿನಗರದ 2ನೇ ಅಡ್ಡರಸ್ತೆಯ ಕಸದತೊಟ್ಟಿಯಲ್ಲಿ ಕಂಬಳಿ ಸುತ್ತಿ ಬಿಸಾಡಿದ್ದ ಶಿಶುವನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ…
ಗಾಳಿ-ಮಳೆಗೆ ನೆಲಕ್ಕುರುಳಿದ ಅಡಿಕೆ ಮರಗಳು
ಚಿಕ್ಕನಾಯಕನ ಹಳ್ಳಿ: ತಾಲೂಕಿನ ಗೋಡೆಕೆರೆಯಲ್ಲಿ ಶುಕ್ರವಾರ ಸಂಜೆ ಸುರಿದ ಬಾರಿ ಮಳೆ ಗಾಳಿ ಹಲವಾರು ಅವಾಂತರ ಸೃಷ್ಟಿ ಮಾಡಿದ್ದು ತೆಂಗು, ಅಡಿಕೆ ಮರಗಳು ಹಾಗು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗೋಡೆಕೆರೆ ಗೊಲ್ಲರಹಟ್ಟಿಯ ಸಿ.ಶಿವಣ್ಣ ಎಂಬುವವರ ಸೊಂಡೆನಹಳ್ಳಿ ಸರ್ವೆ ನಂ.62/2 ತೋಟದಲ್ಲಿ ಸುಮಾರು…
ಅಪ್ರಾಪ್ತನಿಗೆ ಸ್ಕೂಟಿ ಚಾಲನೆ- 25 ಸಾವಿರ ದಂಡ
ಚಿಕ್ಕಮಗಳೂರು: ಅಪ್ರಾಪ್ತನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ ವಾಹನ ಮಾಲೀಕನಿಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಜೆಎಂಎಫ್ ಸಿ ನ್ಯಾಯಾಲಯ ಸ್ಕೂಟಿ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದೆ. ಏ.4ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್…
ಬುರ್ಖಾ ಧರಿಸಿದ ವ್ಯಕ್ತಿ ಬಂಧನ
ಇಳಕಲ್: ಬುರ್ಖಾ ಧರಿಸಿಕೊಂಡು ಕೈಯಲ್ಲಿನ ಚೀಲದಲ್ಲಿ ಚಾಕೊಲೇಟ್, ಬಳೆ, ಹಗ್ಗಗಳನ್ನು ಮತ್ತು ಮುತ್ತಿನ ಸಾಮಾನುಗಳನ್ನು ಇಟ್ಟುಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಬುರ್ಖಾಧಾರಿ ವ್ಯಕ್ತಿಯನ್ನು ನೋಡಿ ಹಿಂದೂ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಲದಿನ್ನಿ ಅವನನ್ನು ಹಿಡಿದುಕೊಂಡು ಬಂದು…
ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ಬೆಂಚ್ ಸ್ಥಾಪನೆಗೆ ಒತ್ತಾಯ
ಬೆಂಗಳೂರು: ನಗರದಲ್ಲಿ ಸುಪ್ರೀಂ ಕೋರ್ಟ್ ಬೆಂಚ್ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ ಎಸ್.ಮೋಹನದಾಸ್ ಹೆಗ್ಡೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ದಕ್ಷಿಣ ಭಾರತದ ನಾಗರಿಕರಿಗೆ…


