ಸೂರಜ್ ರೇವಣ್ಣ ಅರ್ಜಿ ವಜಾ
ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದಿಂದ ಕೈಬಿಡುವಂತೆ ಕೋರಿದ ಮರುಪರಿಶೀಲನ ಅರ್ಜಿ ಇದೀಗ ಕೋರ್ಟ್ ವಜಾ ಗೊಳಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಈ ಒಂದು ಆದೇಶ ಹೊರಡಿಸಿದ್ದಾರೆ.ಹಾಸನ ಜಿಲ್ಲೆಯ…
ಕಾಡಾನೆ ದಾಳಿಗೆ ರೈತ ಬಲಿ
ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್ ಠಾಣೆ ವ್ಯಾಪ್ತಿಯ ಪರಿಣಾಮಿಪುರ ಗ್ರಾಮದಲ್ಲಿ ನಡೆದಿದೆ. ಪರಿಣಾಮಿಪುರ ಗ್ರಾಮದ ನಿವಾಸಿಯಾದ ಗುರುಮಲ್ಲಪ್ಪ ಎಂಬುವವರೇ ಆನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಗುರುಮಲ್ಲಪ್ಪ ಅವರು…
ಚಿನ್ನದ ಸರ ಕಸಿದ ಕಳ್ಳನ ಬಂಧನ
ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಓಡುತ್ತಿದ್ದ ಕಳ್ಳನನ್ನು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಧೈರ್ಯವಾಗಿ ಬೆನ್ನಟ್ಟಿ ಹಿಡಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ತವ್ಯ ಸಮಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲೇ ಪೇದೆ ಹನುಮಂತ…
ಬೈಕ್ ಗೆ ಕಾರು ಡಿಕ್ಕಿ – ಮಗು ಸಾವು
ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್ ಹಾಗೂ ಗುಂಡಿಯಿಂದಾಗಿ ಮಗು ಮೃತಪಟ್ಟಿದೆ. ಮಹದೇವಪುರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದಾಗಿ ಭೀಕರ ಅಪಘಾತ ಸಂಭವಿಸಿದೆ. ಹಿಂದಿನಿಂದ ಬಂದ ಕಾರ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಮಗು ಕೆಳಕ್ಕೆ ಬಿದ್ದಿದೆ.…
ನ್ಯಾಯಾಲಯ ಸ್ಫೋಟಿಸುವ ಬೆದರಿಕೆ ಕರೆ
ಮಂಡ್ಯ: ಮಂಡ್ಯ ಜಿಲ್ಲಾ ನ್ಯಾಯಾಲಯ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದರು. ಮಂಡ್ಯ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಅಲರ್ಟ್ ಆದ ಪೊಲೀಸರು ತಕ್ಷಣವೇ ಎಲ್ಲರನ್ನೂ ಹೊರ ಕಳುಹಿಸಿ ಪರಿಶೀಲನೆ ನಡೆಸಿದರು.…
ಕ್ಷುಲ್ಲಕ ಕಾರಣ ಮಾರಣಾಂತಿಕ ಹಲ್ಲೆ
ಗುಬ್ಬಿ: ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ನಡೆದ ಭೀಕರ ದಾಳಿ ಜನತೆಯನ್ನು ಬೆಚ್ಚಿಬೀಳಿಸಿದೆ. ಬೈಕ್ ನಿಲ್ಲಿಸುವ ವಿಚಾರದಲ್ಲಿ ಶುರುವಾದ ಮಾತಿನ ಚಕಮಕಿ ಕೊನೆಗೆ ರಕ್ತಪಾತದಲ್ಲಿ ಅಂತ್ಯವಾಗಿದ್ದು, ಒಂದೇ ಕುಟುಂಬದ ಆರು ಮಂದಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ. ಅಮ್ಮನಘಟ್ಟದ ಮಾರುತಿನಗರ ಬಡಾವಣೆಯ ನಿವಾಸಿ…
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ನಿರಾಸೆಯಾಗಿದ್ದು, ಅವರ ಮಧ್ಯಂತರ ಜಾಮೀನು ಅರ್ಜಿ ವಜಾ ಆಗಿದೆ. ಮಗಳಿಗೆ ಪರೀಕ್ಷೆ ಸಮೀಪಿಸಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್ನಲ್ಲಿ ಕೋರಿದ್ದರು. ಆದರೆ, 57ನೇ ಸೆಷ್ಸ್…
ನಂದಿಬೆಟ್ಟಕ್ಕೆ ಹೋಗಬೇಕು ಎಂದುಕೊಂಡ ಪ್ರೇಮಿಗಳಿಗೆ ಬೇಸರ
ಫೆ.14 ರಂದು ನಂದಿಬೆಟ್ಟ ಬಂದ್ ಚಿಕ್ಕಬಳ್ಳಾಪುರ: ವಿಶ್ವ ಪ್ರೇಮಿಗಳ ದಿನಾಚರಣೆಗೆ ನಂದಿಬೆಟ್ಟಕ್ಕೆ (ನಂದಿಹಿಲ್ಸ್) ಹೋಗಬೇಕು ಎಂದುಕೊಂಡವರಿಗೆ ಬೇಸರದ ಸಂಗತಿ. ಫೆ.14 ರಂದು ನಂದಿಬೆಟ್ಟಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಉಪ ಆಯುಕ್ತ…
ಭೀಕರ ಸರಣಿ ಅಪಘಾತ: 7 ಜನ ದುರ್ಮರಣ
ದೇವನಹಳ್ಳಿ: ಹೊಸಕೋಟೆ-ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 7 ಜನ ದುರ್ಮರಣ ಹೊಂದಿದ್ದು, ಅಪಘಾತದಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ ಘಟನೆಯ ಕುರಿತು ವಿವರಿಸಿದ್ದಾರೆ. ಮಾಲೂರು ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನ ಕ್ಯಾಂಟರ್ ಗೆ ಗುದ್ದಿದೆ.…
ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ
20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ ಚಾಮರಾಜನಗರ: ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಒಂದು ಭೀಕರ ಅಪಘಾತ ನಡೆದಿದೆ. ಕೆಎಸ್ಆರ್ ಟಿಸಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಜಿಲ್ಲೆಯ ಹನೂರು…


