ಆಕಸ್ಮಿಕ ಬೆಂಕಿಗೆ ಬಸ್ ಧಗಧಗ

ನಾಗಮಂಗಲ: ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ ಧಗಧಗನೆ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಕದಬಹಳ್ಳಿ ಬಳಿ ಶನಿವಾರ ನಸುಕಿನ ವೇಳೆ ನಡೆದಿದೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಉಡುಪಿಯಿಂದ ಬೆಂಗಳೂರು ಕಡೆಗೆ ಖಾಸಗಿ ಬಸ್ ಚಲಿಸುತ್ತಿತ್ತು. ಕದಬಹಳ್ಳಿ ಟೋಲ್ ಗೇಟ್ ಬಳಿ ಇದ್ದಕ್ಕಿದ್ದಂತೆ ಬಸ್ ನಲ್ಲಿ ಬೆಂಕಿ ಕಾಣಿಸಿದೆ. ಕೂಡಲೇ ಬಸ್ ಚಾಲಕ ಬಸ್ ನಲ್ಲಿದ್ದ 25 ಪ್ರಯಾಣಿಕರನ್ನು ತಮ್ಮ ಲಗೇಜ್ ಸಹಿತ ಕೆಗೆ ಇಳಿಯಲು ತಿಳಿಸಿದ್ದಾನೆ. ಬಳಿಕ … Read more

ಮೂರು ವರ್ಷದ ಹೆಣ್ಣು ಚಿರತೆ ಸಾವು

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಉರುಳುಗೆರೆ ಗ್ರಾಮದ ಹೇಮಾವತಿ ನಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು ಮೂರು ವರ್ಷದ ಹೆಣ್ಣು ಚಿರತೆಯೊಂದು ಸತ್ತು ಬಿದ್ದಿರುವುದು ಕಂಡು ಬಂದಿದೆ. ಬೆಳಗ್ಗೆ ಚಿರತೆ ಸತ್ತಿರುವುದನ್ನು ಕಂಡ ಕೂಡಲೇ ಗ್ರಾಮಸ್ಥರು ಸಿ.ಎಸ್.ಪುರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ, ಪೊಲೀಸರು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ, ಚಿರತೆಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಎರಡು ಚಿರತೆ ಹೊಡೆದಾಡಿಕೊಂಡು ಸತ್ತಿರುವ … Read more

ಮೂವರು ಮನೆಗಳ್ಳರ ಬಂಧನ

ಬೆಂಗಳೂರು: ಮೋಜು ಮಸ್ತಿಗಾಗಿ ಮನೆಗಳ್ಳತನ ಮಾಡಿ ಗೋವಾಗೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರು ಮನೆಗಳ್ಳರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ 18.10ಲಕ್ಷ ರೂ.ಮೌಲ್ಯದ 213 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಶಿವಕುಮಾರ್ (27), ಸ್ನೇಹಿತರಾದ ಶಿವನಾಗಪ್ಪ ಮತ್ತು ಸುದರ್ಶನ್ ಬಂಧಿತ ಮನೆಗಳ್ಳರು. ಆರೋಪಿ ಶಿವಕುಮಾರ್ ಬಳ್ಳಾರಿ ಮೂಲದವನಾಗಿದ್ದು, ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹೆಸರುಘಟ್ಟದಲ್ಲಿರುವ ಹಾಲೋಬ್ರಿಕ್ ಸ್ ಕಾರ್ಖಾನೆಯಲ್ಲಿ ಶಿವಕುಮಾರ್ ಕೆಲಸ ಮಾಡುತ್ತಿದ್ದಾಗ ಆ … Read more

ರೈತನ ಮೇಲೆ ಗುಂಡು ಹಾರಿಸಿದ ಗಣಿ ಮಾಲೀಕ

ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದಿದೆ. ಗಣಿ ಮಾಲೀಕ ಸಕಲೇಶ್ ಎಂಬಾತ ಸ್ಥಳೀಯ ರೈತ ರವಿ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ. ಗಣಿಗಾರಿಕೆ ಲಾರಿಗಳ ಓಡಾಟ ಮತ್ತು ರಸ್ತೆ ನಿರ್ಮಾಣ ವಿರೋಧಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು. ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ … Read more

ಉಗ್ರರ ದಾಳಿಯಲ್ಲಿ ರಾಜ್ಯದ ಇಬ್ಬರು ಸಾವು

ಬೆಂಗಳೂರು: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪ್ರವಾಸಿಗರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ. ಶಿವಮೊಗ್ಗ ನಿವಾಸಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಆದರೆ ಅವರೊಂದಿಗೆ ಇದ್ದ ಅವರ ಕುಟುಂಬಗಳು ಸುರಕ್ಷಿತವಾಗಿವೆ, ಸ್ಟಾವೇರ್ ಉದ್ಯೋಗಿಯಾಗಿದ್ದ 41 ವರ್ಷದ ಭರತ್ ಭೂಷಣ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ, ಆದರೆ ಆ ಸಮಯದಲ್ಲಿ ಅವರೊಂದಿಗೆ ಇದ್ದ ಅವರ ಪತ್ನಿ ಸುಜಾತಾ ಮತ್ತು ಅವರ ಮೂರು ವರ್ಷದ ಮಗ … Read more

ಮಂಜುನಾಥ್ಗೆ ಗುಂಡೇಟು- ಕುಟುಂಬಕ್ಕೆ ಮಧು ಸಾಂತ್ವನ

ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಯಲ್ಲಿ ನಮ್ಮ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರು ಉಗ್ರರ ಗುಂಡೇಟಿಗೆ ಬಲಿಯಾದ ಸಂಗತಿ ಅತ್ಯಂತ ದುಃಖಕರ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ವರ್ಗದವರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿ ಧರ್ಯ ತುಂಬಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ನಿರಂತರ … Read more

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ- ಆರೋಪಿ ಬಂಧನ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಜೆಗಾಗಿ ತನ್ನ ಊರಿಗೆ ತೆರಳಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 31 ವರ್ಷದ ಯುವಕನನ್ನು ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧನಂಜಯ್ ಎಂದು ತಿಳಿದು ಬಂದಿದೆ, ಈ ಘಟನೆ ಮಂಗಳೂರಿನಲ್ಲಿ ಬಾಲಕಿಯ ಅಮ್ಮನ ಸ್ನೇಹಿತೆಯ ಮನೆಯಲ್ಲಿ ನಡೆದಿದ್ದು, ಆರೋಪಿ ಬಾಲಕಿಯ ಖಾಸಗಿ ಆಟೋಗಳು ಮತ್ತು ವೀಡಿಯೋಗಳನ್ನು ಬಳಸಿಕೊಂಡು ಆಕೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ತಿಳಿದುಬಂದಿದೆ, ಘಟನೆಯ ಬಳಿಕ, … Read more

ಚಿನ್ನದ ಸರ ಕದ್ದಿದ್ದ ಕಳ್ಳನ ಬಂಧನ

ಚೇಳೂರು: ಮನೆಯಲ್ಲಿಟ್ಟಿದ್ದ ಚಿನ್ನದ ಸರ ಕದ್ದಿದ್ದ ಕಳ್ಳನನ್ನು ಬಂಧಿಸಿರುವ ಚೇಳೂರು ಠಾಣೆ ಪೊಲೀಸರು ಆತನಿಂದ ₹3.50 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ. ಹಾಗಲವಾಡಿ ಗ್ರಾಮದ ಎಚ್.ಎಸ್.ಸುದೀಶ್ (41) ಬಂಧಿತ ಕಳ್ಳ, ಹಾಗಲವಾಡಿಯ ಸಿದ್ದರಾಮಕ್ಕ ತಮ್ಮ ಮನೆಯ ಹಾಲ್ ನಲ್ಲಿ ಮಲಗಿದ್ದರು, ಮಾಂಗಲ್ಯ ಸರ ಬಿಚ್ಚಿ ದಿಂಬಿನ ಕೆಳಗಡೆ ಇಟ್ಟಿದ್ದರು, ನಿದ್ದೆಯಿಂದ ಎಚ್ಚರಗೊಂಡಾಗ ಚಿನ್ನದ ಸರ ಕಾಣೆಯಾಗಿತ್ತು. ಈ ಕುರಿತು ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ರಚಿಸಿದ ವಿಶೇಷ … Read more

ರೈಲಿಗೆ ಸಿಲುಕಿ ಚಿರತೆ ಸಾವು

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರದ ಸಮೀಪ ರೈಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಒಂದು ವರ್ಷದ ಹೆಣ್ಣು ಚಿರತೆ ಮಂಗಳವಾರ ಬೆಳಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಸಿಮೆಂಟ್ ಕಾರ್ಖಾನೆಯ ಹಿಂಭಾಗ ರೈಲಿಗೆ ಸಿಕ್ಕಿದೆ, ಚಿರತೆ ರೈಲುಗಾಲಿಗೆ ಸಿಲುಕಿದ ಪರಿಣಾಮ ಅದರ ತಲೆ ಮತ್ತು ಮುಂಗಾಲು ತುಂಡಾಗಿ ಹೋಗಿದೆ. ಬೆಳಗ್ಗೆ ಎಂದಿನಂತೆ ಲೈನ್ ಮೆನ್ ಗಳು ರೈಲ್ವೆ ಹಳಿ ಪರೀಕ್ಷಿಸುವಾಗ ಚಿರತೆ ರೈಲಿಗೆ ಸಿಕ್ಕಿ ಅಸುನೀಗಿರುವುದು ಪತ್ತೆಯಾಗಿದೆ, ರೈಲ್ವೆ ಅಧಿಕಾರಿಗಳು ನೀಡಿದ ದೂರಿನ್ವಯ ಸ್ಥಳಕ್ಕೆ … Read more

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ತಮ್ಮನ್ನು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕ್ರೈಂ ನಂ.20 ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿತು. ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಮಾಜಿ ಸಂಸದ … Read more