--ಇಲ್ಲಿ ಜಾಹೀರಾತು--

ಚಿನ್ನದ ಸರ ಕದ್ದಿದ್ದ ಕಳ್ಳನ ಬಂಧನ

On: April 23, 2025 2:23 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಚೇಳೂರು: ಮನೆಯಲ್ಲಿಟ್ಟಿದ್ದ ಚಿನ್ನದ ಸರ ಕದ್ದಿದ್ದ ಕಳ್ಳನನ್ನು ಬಂಧಿಸಿರುವ ಚೇಳೂರು ಠಾಣೆ ಪೊಲೀಸರು ಆತನಿಂದ ₹3.50 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ.
ಹಾಗಲವಾಡಿ ಗ್ರಾಮದ ಎಚ್.ಎಸ್.ಸುದೀಶ್ (41) ಬಂಧಿತ ಕಳ್ಳ, ಹಾಗಲವಾಡಿಯ ಸಿದ್ದರಾಮಕ್ಕ ತಮ್ಮ ಮನೆಯ ಹಾಲ್ ನಲ್ಲಿ ಮಲಗಿದ್ದರು, ಮಾಂಗಲ್ಯ ಸರ ಬಿಚ್ಚಿ ದಿಂಬಿನ ಕೆಳಗಡೆ ಇಟ್ಟಿದ್ದರು, ನಿದ್ದೆಯಿಂದ ಎಚ್ಚರಗೊಂಡಾಗ ಚಿನ್ನದ ಸರ ಕಾಣೆಯಾಗಿತ್ತು. ಈ ಕುರಿತು ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ರಚಿಸಿದ ವಿಶೇಷ ತಂಡ ಕಳ್ಳನನ್ನು ಬಂಧಿಸಿದೆ, ಗುಬ್ಬಿ ಠಾಣೆ ಸಿಪಿಐ ಟಿ.ಆರ್.ರಾಘವೇಂದ್ರ, ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ಜೆ.ಆರ್.ನಾಗರಾಜು, ಸಿಬ್ಬಂದಿ ನಾಗೇಶ್, ನಾಗಭುಷಣ್, ವಿ.ದೀಪಕ್, ಅಶೋಕ್ ಕುಮಾರ್, ನಾಗರಾಜು ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now