ತಿಪಟೂರು: ಹೊನ್ನವಳ್ಳಿ ಹೋಬಳಿ ಸಾರ್ಥವಳ್ಳಿ ಗ್ರಾಮದ 11 ವರ್ಷದ ಬಾಲಕಿ ಹೇಮಶ್ರೀ ಮನೆಯ ಮುಂಭಾಗದ ಕೆರೆಯಲ್ಲಿ ಚಿಕ್ಕ ಗುಂಡಿಯಲ್ಲಿ ಕಾಲು ತೊಳೆಯಲು ಹೋಗಿ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಅರಸೀಕೆರೆ ತಾಲ್ಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಬಾಲಕಿ ಶಾಲೆಯ ಬೇಸಿಗೆ ರಜೆ ಕಳೆಯಲು ಅಜ್ಜಿ ತಾತನ ಮನೆಯಾದ ಸಾರ್ಥವಳ್ಳಿ ಊರಿಗೆ ಬಂದಿದ್ದರು, ಸೈಕಲ್ ಓಡಾಡಿಸಿ ಕಾಲಿನ ಕೆಸರು ತೊಳೆಯಲು ಕೆರೆಯ ಸಣ್ಣಗುಂಡಿಗೆ ಹೋಗಿದ್ದ ಬಾಲಕಿ 4 ಅಡಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ, ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೀರಿನ ಗುಂಡಿಗೆ ಬಿದ್ದು ಬಾಲಕಿ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು