--ಇಲ್ಲಿ ಜಾಹೀರಾತು--

ಹಣ ಕೊದ್ದೊಯ್ದಿದ್ದ ಕಾರು ಚಾಲಕ ಬಂಧನ

On: May 13, 2025 1:59 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಕೆಲಸ ನೀಡಿದ ಮಾಲೀಕರ ನಂಬಿಕೆಗೆ ದ್ರೋಹ ಬಗೆದು 1.51 ಕೋಟಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ಕಾರು ಚಾಲಕನನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರರಪ್ರದೇಶ ಮೂಲದ ರಾಜೇಶ್ (45) ಬಂಧಿತ ಕಾರು ಚಾಲಕ. ಈತನಿಂದ 1,48,36,500 ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಕೋದಂಡರಾಯಪುರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ರೊಬ್ಬರು ಆಫೀಸ್ ಇಟ್ಟುಕೊಂಡಿದ್ದಾರೆ. ಇವರ ಬಳಿ 10 ವರ್ಷಗಳಿಂದ ರಾಜೇಶ್ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಮಾಲೀಕರ ನಂಬಿಕೆಗಳಿಸಿದ್ದನು. ಇತ್ತೀಚೆಗೆ ತಮ ಗ್ರಾಹಕರ ಟ್ಯಾಕ್ ಸ್ ತುಂಬುವ ಸಲುವಾಗಿ 1.51 ಕೋಟಿ ಹಣವನ್ನು ಬ್ಯಾಂಕಿಗೆ ಸಂದಾಯ ಮಾಡುವ ಸಲುವಾಗಿ ಕಾರಿನಲ್ಲಿಡಲು ಚಾಲಕನಿಗೆ ನೀಡಿದ್ದರು. ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕಾರು ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾರು ಚಾಲಕನು ಠಾಣೆಗೆ ಹಾಜರಾಗಿದ್ದು ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಣ ಕಳುವು ಮಾಡಿರುವುದಾಗಿ ಹೇಳಿದ್ದಾನೆ. ಕಳುವು ಮಾಡಿದ್ದ ಹಣವನ್ನು ಟಿಟಿಡಿ ದೇವಸ್ಥಾನದ ಬಳಿ ಇರುವ ತನ್ನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾನೆ. ಈತನ ಮಾಹಿತಿಯಂತೆ ಪೊಲೀಸರು ಆತನ ಮನೆಗೆ ತೆರಳಿ ಪರಿಶೀಲಿಸಿ 1.48 ಕೋಟಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್ ಸ್ ಪೆಕ್ಟರ್ ಶಂಕರಗೌಡ ಬಸನಗೌಡರ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now