ಕುಣಿಗಲ್: ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಮಗನೇ ತನ್ನ ಸ್ನೇಹಿತರ ಜೊತೆಗೂಡಿ ತಂದೆಯನ್ನೇ ಕೊಲೆ ಮಾಡಿರುವ ಧಾರಣ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೊಲೆಯಾದವನನ್ನು ನಾಗವಲ್ಲಿ ಹೋಬಳಿ ತಿಮ್ಮಸಂದ್ರ ಗ್ರಾಮದ ನಾಗೇಶ (55) ಎಂದು ಗುರುತಿಸಲಾಗಿದೆ, ಈತ ಪಟ್ಟಣದಲ್ಲಿ ಪುರಸಭೆ ಬಸ್ ನಿಲ್ದಾಣದ ಸಮೀಪ ಐಸ್ ಕ್ರೀಂ ಅಂಗಡಿ ನಡೆಸುತ್ತಿದ್ದ, ಕಳೆದ ಭಾನುವಾರ ಅಂಗಡಿಯಲ್ಲಿ ಈತನ ಮೃತ ದೇಹ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಂತೆ ಕಾಣ ಬರುತ್ತಿತ್ತು, ಘಟನೆ ಸಂಬಂಧ ಮೃತನ ಮಗಳು ಪೊಲೀಸರಿಗೆ ದೂರು ನೀಡಿ, ತಂದೆ ಸಾವಿಗೆ ಅನುಮಾನ ವ್ಯಕ್ತಪಡಿಸಿದ್ದಳು, ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ನವೀನ್ ಗೌಡ ಸಿಬ್ಬಂದಿ ತನಿಖೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೃತನ ಮಗ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೃತನ ಮಗ ಸೂರ್ಯ ತನ್ನ ತಂದೆಯ ಕಿರುಕುಳದಿಂದ ಬೇಸತ್ತು ಸ್ನೇಹಿತರಾದ ಧನುಷ್, ಸಂಜಯ್ ಇತರರೊಂದಿಗೆ ಸೇರಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಇತರೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ಆರೋಪಿ ಇದಕ್ಕೂ ಮುಂಚೆ ತಂದೆಯನ್ನು ಕಾರು ಉಪಯೋಗಿಸಿ ಅಪಘಾತ ಮಾಡಿ ಕೊಲ್ಲಲು ಯೋಜಿಸಿದ್ದು, ಅದು ವಿಲಗೊಂಡಿತ್ತು ಎನ್ನಲಾಗಿದೆ.
ತಂದೆಯನ್ನೇ ಕೊಂದ ಮಗ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು