
ಗುಂಡ್ಲುಪೇಟೆ: ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಹಸುವಿನ ಕರುವನ್ನು ಬಲಿ ಪಡೆದಿದೆ. ಗ್ರಾಮದ ರವೀಶ್ ಎಂಬುವವರಿಗೆ ಸೇರಿದ ಕರು ಜಮೀನನಲ್ಲಿ ಮೇಯುತ್ತಿದ್ದ ವೇಳೆ ಚಿರತೆ ಹಠಾತ್ ದಾಳಿ ನಡೆಸಿದೆ. ಇದರಿಂದ ಸುತ್ತಲಿನ ಭೂಮಿ ಮಾಲೀಕರು ಭಯಭೀತರಾಗಿದ್ದಾರೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕರೆ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ ಕಾಟ ಹೆಚ್ಚಾಗಿದೆ. ಜಾನುವಾರು, ಮೇಕೆಗಳ ಮೇಲೆ ದಾಳಿ ನಡೆಸಿ ಕೂಂದು ಹಾಕುತ್ತಿದೆ. ಇದರಿಂದ ರೈತರು ರೋಸಿ ಹೋಗಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯುವ ಜೊತೆಗೆ ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Author
Post Views: 1,315






