ದಾವಣಗೆರೆ: ಇನ್ ಸ್ಟ್ರಾಗ್ರಾಂನಲ್ಲಿ ಬಂದ ಲಿಂಕ್ ನಂಬಿ ಹಣ ಹೂಡಿಕೆ ಮಾಡಿದ್ದ ವ್ಯಾಪಾರಿಯೊಬ್ಬರು 51 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿಯ ಮಧುಕುಮಾರ್ ಎಂಬುವರಿಗೆ ಹಣ ಹೂಡಿಕೆ ಮೇಲೆ ಶೇ.200ರಷ್ಟು ಲಾಭ ಸಿಗಲಿದೆ ಎಂದು ಇನ್ ಸ್ಟ್ರಾಗ್ರಾಂನಲ್ಲಿ ಲಿಂಕ್ ಬಂದಿತ್ತು. ಇದನ್ನೇ ನಂಬಿದ ಮಧುಕುಮಾರ್ ತಮ್ಮ ಹೆಸರು, ಪ್ಯಾನ್ ಕಾರ್ಡ್, ಫೋನ್ ನಂಬರ್ ನೀಡಿ ಹೊಸ ಐಡಿ ತೆರೆದಿದ್ದಾರೆ. ಕಳೆದ 2024ರ ಸೆಪ್ಟಂಬರ್ 22ರಿಂದ 2025 ಏಪ್ರಿಲ್ 26ರವರೆಗೆ ಒಟ್ಟು 51,24,464 ರೂ. ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಮಧುಕುಮಾರ್ ಹಣ ಬಿಡಿಸಿಕೊಳ್ಳಲು ಹೋದಾಗ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. 24 ಗಂಟೆ ನಂತರ ಅಕೌಂಟ್ ರೀ ಓಪನ್ ಆದಾಗ, ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಜೀರೋ ತೋರಿಸಿದೆ. ಚಾಟ್ ಬೋರ್ಡ್ನಲ್ಲಿ ಸಂಪರ್ಕಿಸಿದಾಗ ಎಲ್ಲವನ್ನೂ ಡಿಲಿಟ್ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ ಸ್ಟಾಗ್ರಾಂ ಲಿಂಕ್ ನಂಬಿ 51 ಲಕ್ಷ ಕಳೆದುಕೊಂಡ ವ್ಯಾಪಾರಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು