--ಇಲ್ಲಿ ಜಾಹೀರಾತು--

ಆಸ್ತಿ ತೆರಿಗೆ ಬಾಕಿ- ಮೂರು ದಿನದಲ್ಲಿ ಪಾವತಿಸಲು ಸೂಚನೆ ಶಿವಗಂಗಾ ಚಿತ್ರಮಂದಿರ, ಕಲ್ಯಾಣ ಮಂಟಪ ಜಪ್ತಿ

On: May 23, 2025 2:00 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಕೊರಟಗೆರೆ: 2018 ರಿಂದ 2025ರ ವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶಿವಗಂಗಾ ಚಿತ್ರಮಂದಿರದ ಮಾಲೀಕನಿಗೆ ಪಟ್ಟಣ ಪಂಚಾಯಿತಿ ಅಧಿಕಾರಿ ವರ್ಗ ಶುಕ್ರವಾರ ಬಿಗ್ ಶಾಕ್ ನೀಡಿದ್ದು ಚಿತ್ರಮಂದಿರ, ಕಲ್ಯಾಣಮಂಟಪ, ಹೋಟೆಲ್ ಜಪ್ತಿ ಮಾಡಿ 3 ದಿನದ ಒಳಗೆ ಕಂದಾಯ ಪಾವತಿ ಮಾಡುವಂತೆ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಕೊರಟಗೆರೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.1ರ ಗಂಗಾಧರಯ್ಯ ಬಿನ್ ಬಸೇಟಪ್ಪ ಖಾತೆ ನಂ.37/37ರ ಬಾಕಿ ಇರುವ ಆಸ್ತಿ ತೆರಿಗೆಯನ್ನು 1964ರ ಕಲಂ ಪುರಸಭಾ ಕಾಯ್ದೆ ಮತ್ತು ಸ್ವಯಂ ಘೋಷಣೆ ತೆರಿಗೆ ಪದ್ಧತಿಯಂತೆ ನಿಯಾಮನುಸಾರ ಪಾವತಿಸಬೇಕು, ಪ.ಪಂಚಾಯ್ತಿಯಿಂದ ಈಗಾಗಲೇ ತೆರಿಗೆ ಪಾವತಿಸುವಂತೆ 2018ರಿಂದ 2022ರ ವರೆಗೆ 6ಬಾರಿ ತಿಳುವಳಿಕೆ ನೋಟಿಸ್ ನೀಡಿದ್ದುಅಂತಿಮವಾಗಿ ನೋಟಿಸ್ ರಿಜಿಸ್ಟರ್ ಮೂಲಕ ಕಳುಹಿಸಲಾಗಿತ್ತು.
ತಿಳುವಳಿಕೆ ಪತ್ರ ಸ್ವೀಕರಿಸದೆ ತಿರಸ್ಕೃತ ಮಾಡಿದ ಕಾರಣ ಶಿವಗಂಗಾ ಚಿತ್ರಮಂದಿರಕ್ಕೆ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಬಿಗ್ ಶಾಕ್ ನೀಡಿದ್ದು, ಪಾವತಿಸಬೇಕಾಗಿರುವುದು ತಪ್ಪಿದಲ್ಲಿ 143ರಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಅಂತಿಮ ತಿಳುವಳಿಕೆ ನೋಟಿಸ್ ನಲ್ಲಿ ಉಲ್ಲೇಖಿಸಿದೆ.

ತೆರಿಗೆ ಆಸ್ತಿ ಬಾಕಿ ವಿವರ
ಶಿವಂಗಾ ಚಿತ್ರಮಂದಿರದ ಮಾಲೀಕನಿಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಈಗಾಗಲೇ ಪಪಂ 6 ಬಾರಿ ನೋಟಿಸ್ ನೀಡಿದೆ, ಅಂತಿಮ ತಿಳುವಳಿಕೆ ನೋಟಿಸ್ ತಿರಸ್ಕೃತ ಮಾಡಿದ ಕಾರಣ ಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿದ್ದು ಬಾಕಿ ಉಳಿಸಿಕೊಂಡ 10 ಲಕ್ಷಕ್ಕೂ ಹೆಚ್ಚಿನ ಹಣ 3 ದಿನದ ಒಳಗೆ ಪಾವತಿಸುವಂತೆ ಪ.ಪಂಚಾಯಿತಿ ತಿಳುವಳಿಕೆ ನೋಟಿಸ್ ನಲ್ಲಿ ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ್,ಆರೋಗ್ಯ ನಿರೀಕ್ಷಕ ಹಿಸೇನ್, ಆರ್.ಐ ವೇಣುಗೋಪಾಲ್ ಸೇರಿದಂತೆ ಇತರರು ಇದ್ದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now