ಅಪಘಾತದಲ್ಲಿ ಇಬ್ಬರು ಯುವಕರ ಬಲಿ

ತಿಪಟೂರು: ರಾಷ್ಟ್ರೀಯ ಹೆದ್ದಾರಿ ಮತ್ತಿಹಳ್ಳಿ ಗೇಟ್ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ದುರ್ದೈವಿಗಳು ಅಯ್ಯನ ಬಾವಿ ನಿವಾಸಿಗಳಾದ ಉಮೇಶ್ (32), ರಜನಿಕಾಂತ್ (33) ಎಂದು ತಿಳಿದುಬಂದಿದೆ, ತಿಪಟೂರು ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ರಭಸವಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ವರ್ಷಗಳಿಂದ … Read more

ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಮಂಗಳೂರು: ತಮ್ಮ ನಿವೇಶನ ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿದಂತ ವ್ಯಕ್ತಿಗೆ 5 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕಷ್ಣವೇಣಿ ಎಂಬುವರಿಗೆ ಗಣೇಶ್ ಶೆಟ್ಟಿ ಎಂಬುವರು ತಮ್ಮ ನಿವೇಶನವನ್ನು ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು.ಇಂತಹ ಗಣೇಶ್ ಶೆಟ್ಟಿ ಅವರಿಗೆ ಅನುಮತಿ ನೀಡಲು 5 … Read more

ವಿದೇಶ ಪ್ರಯಾಣಕ್ಕೆ ಅನುಮತಿಗೆ ದರ್ಶನ್ ಅರ್ಜಿ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಕೋರಿ ಬುಧವಾರ ಬೆಂಗಳೂರಿನ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಡೆವಿಲ್ ಸಿನಿಮಾ ಶೂಟಿಂಗಾಗಿ ದುಬೈ ಮತ್ತು ಯೂರೋಪ್ ಗೆ ತೆರಳಲು ಜೂನ್ 1 ರಿಂದ 25 ರವರೆಗೆ 25 ದಿನಗಳ ಕಾಲ ಅನುಮತಿ ಕೋರಿ ಸಿ ಆರ್ ಪಿ ಸಿ ಸೆಕ್ಷನ್ 439(1) (ಚಿ) ಅಡಿ 57 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆರೋಪಿ ದರ್ಶನ್ ಅವರು ಸದ್ಯ ಜಾಮೀನಿನ ಮೇಲೆ … Read more

ಚಿನ್ನದ ವಡವೆ ಕಳವು- ದೂರು ದಾಖಲು

ಕುಣಿಗಲ್: ಬಸ್ಸಿನಲ್ಲಿ ಚಿನ್ನದ ವಡವೆಗಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 130 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಗಮ್ಮ ಎಂಬುವರು ಬೆಂಗಳೂರಿನಲ್ಲಿ ವಾಸವಿದ್ದು ಮೂಲ ಗ್ರಾಮ ತಾಲೂಕಿನ ಅಮೃತೂರು ಹೋಬಳಿಯ ಸಣಬ ದವರಾಗಿದ್ದಾರೆ, ಕೆಲ ದಿನಗಳ ಹಿಂದೆ ಇವರಿಗೆ ಹಾಗೂ ಸಂಬಂಧಿಗೆ ಸೇರಿದ 130 ಗ್ರಾಂ ಚಿನ್ನವನ್ನು ಅಮೃತೂರಿನ ಬ್ಯಾಂಕ್ ನಲ್ಲಿ ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಅಡವಿಟ್ಟಿದ್ದು ನಂತರ ಮೇ 19 ರಂದು ಬ್ಯಾಂಕ್ ಗೆ ಹಣ ಪಾವತಿಸಿ ವಡವೆಗಳನ್ನು ಬ್ಯಾಗ್ ನಲ್ಲಿ … Read more

ಒಂದೇ ದಿನ 33 ಕೊವಿಡ್ ಪ್ರಕರಣ ದೃಢ

ಬೆಂಗಳೂರು: ದೇಶದಾದ್ಯಂತ ಮತ್ತೆ ಮಹಾಮಾರಿ ಕೊರೊನಾ ಹಾವಳಿ ಜೋರಾಗಿದೆ. ರಾಜ್ಯದಲ್ಲೂ ಸಹ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಒಂದೇ ದಿನ 33 ಪ್ರಕರಣ ದೃಢಪಟ್ಟಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 80ಕ್ಕೇರಿದೆ. ಈ ಸಲುವಾಗಿ ಸಿದ್ದರಾಮಯ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿ ಕೆಲ ಸೂಚನೆ ನೀಡಿದ್ದಾರೆ. ಕೋವಿಡ್ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಮೊನ್ನೆ ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಹಾಗೂ ಟಾಸ್ಕ್ ಫೋರ್ಸ್ ಜೊತೆ ಮೀಟಿಂಗ್ ಮಾಡಿ ಮುನ್ನೆಚ್ಚರಿಕಾ ಕ್ರಮಗಳನ್ನು … Read more

ಪಿಕಪ್ ಚಾಲಕನ ಬರ್ಬರ ಹತ್ಯೆ

ಬಂಟ್ವಾಳ: ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು. ಕೊಳತ್ತಮಜಲು ನಿವಾಸಿ ರಹೀಮ್ ಎಂಬಾತ ಕೊಲೆಗೀಡಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ. ರಹೀಮ್ ಜೊತೆ ಇನ್ನೊಬ್ಬ ಕೂಡ ಇದ್ದು ಆತನಿಗೆ ಕೈಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. … Read more

ವಿದ್ಯುತ್ ಶಾಕ್- ಬಾಲಕ ಸ್ಥಳದಲ್ಲಿಯೇ ಸಾವು

ಚಿಕ್ಕನಾಯಕನಹಳ್ಳಿ: ರಜೆ ಮುಗಿಸಿಕೊಂಡು ಶಾಲೆಗೆ ಹೋಗಬೇಕಾಗಿದ್ದ 13 ವರ್ಷದ ವಿದ್ಯಾರ್ಥಿ ಅಚುತ್ ಕುಮಾರ್ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಪಟ್ಟಣದ ಬಿ.ಹೆಚ್.ರಸ್ತೆಯ ಅರಣ್ಯ ಇಲಾಖೆ ಸಮೀಪದ ಮನೆಯ ಮುಂಭಾಗದಲ್ಲಿ ಎಂದಿನಂತೆ ಆಟವಾಡುತ್ತಿದ್ದ ಅಚುತ್ ಕುಮಾರ್ ಗೆ ಮನೆ ಮುಂಭಾಗ ಹಾಕಿದ್ದ ಶೀಟ್ ಗೆ ವಿದ್ಯುತ್ ಸ್ಪರ್ಶಗೊಂಡು ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ, ಅಚುತ್ ಕುಮಾರ್ ಪಟ್ಟಣದ ಕೆ ಎಂ ಹೆಚ್ ಪಿ ಎಸ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದು ಬೇಸಿಗೆ ರಜೆ ಮುಗಿಸಿಕೊಂಡು … Read more

ಪೊಲೀಸರ ಯಡವಟ್ಟು- ಮಗು ಸಾವು

ಮಂಡ್ಯ: ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಸೋಮವಾರ ನಡೆದಿದೆ. ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದಾಗ ಕೆಳಗೆ ಬಿದ್ದ ಮಗು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಪುತ್ರಿ ರಿತಿಕ್ಷಾ (3) ಮೃತಪಟ್ಟ ಮಗು. ಘಟನೆ ವಿವರ: ಮಹೇಶ್ ಅವರು ತನ್ನ ಪತ್ನಿ ಹಾಗೂ ತನ್ನ ಮೂರು ವರ್ಷದ ಮಗಳನ್ನು ಮಿಮ್ಸ್ ಆಸ್ಪತ್ರೆಗೆ ನಾಯಿ ಕಡಿತದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಕರೆತರುತ್ತಿದ್ದರು. ಈ ವೇಳೆ ಸಂಚಾರಿ ಪೊಲೀಸರು … Read more

ಭೀಕರ ಅಪಘಾತ- ನಾಲ್ವರ ದುರ್ಮರಣ

ಬಳ್ಳಾರಿ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಪೂರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಮೃತರನ್ನು ಆಶಾ (28), ಸ್ವಾತಿ (5), ಬಿಂದುಶ್ರೀ ಎಂದು ಗುರಿತಿಸಲಾಗಿದೆ, ಸಾವನ್ನಾಪ್ಪಿದ ಇನ್ನೋರ್ವರ ಮಾಹಿತಿ ಲಭ್ಯವಾಗಿಲ್ಲ, ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಎಚ್.ಡಿ.ಕೋಟೆ: ಪಟ್ಟಣದ ಹೆಬ್ಬಾಳ ಜಲಾಶಯದಲ್ಲಿ ನೀರಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್.ಡಿ. ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದ ನಿವಾಸಿ ಮಹದೇವಸ್ವಾಮಿ (55), ಪತ್ನಿ ಮಂಜುಳಾ (42), ಪುತ್ರಿ ಹರ್ಷಿತಾ ಮೃತಪಟ್ಟವರು. ಶನಿವಾರ ಮುಂಜಾನೆ ಜಲಾಶಯಕ್ಕೆ ಆಗಮಿಸಿದ ಮೂವರೂ ಡೆತ್ ನೋಟ್ ಬರೆದು, ದಡದಲ್ಲಿ ಬೈಕ್ ನಿಲ್ಲಿಸಿ, ನೀರಿಗೆ ಹಾರಿದ್ದಾರೆ. ಗ್ರಾಮಸ್ಥರು ಆ ಮಾರ್ಗವಾಗಿ ಸಂಚರಿಸುವಾಗ ಬೈಕ್ ನಿಲ್ಲಿಸಿರುವುದನ್ನು ಗಮನಿಸಿ, ಚಪ್ಪಲಿಗಳೂ ದಡದಲ್ಲಿ ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದಾಗ ಬೈಕ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. … Read more