--ಇಲ್ಲಿ ಜಾಹೀರಾತು--

ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

On: May 28, 2025 2:43 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಮಂಗಳೂರು: ತಮ್ಮ ನಿವೇಶನ ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿದಂತ ವ್ಯಕ್ತಿಗೆ 5 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕಷ್ಣವೇಣಿ ಎಂಬುವರಿಗೆ ಗಣೇಶ್ ಶೆಟ್ಟಿ ಎಂಬುವರು ತಮ್ಮ ನಿವೇಶನವನ್ನು ನೆಲಸಮಗೊಳಿಸಲು ಲ್ಯಾಟರೈಟ್ ಕಲ್ಲು ತೆಗೆಯಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು.ಇಂತಹ ಗಣೇಶ್ ಶೆಟ್ಟಿ ಅವರಿಗೆ ಅನುಮತಿ ನೀಡಲು 5 ಲಕ್ಷ ಲಂಚಕ್ಕೆ ಬೇಡಿಕೆಯನ್ನು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಇಟ್ಟಿದ್ದರು. ಹೀಗಾಗಿ ಗಣೇಶ್ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ 5 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಮಂಗಳೂರು ಲೋಕಾಯುಕ್ತ ಎಸ್ಪಿ ನೇತತ್ವದಲ್ಲಿ ದಾಳಿಯನ್ನು ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಮೂಲಕ 5 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now