ಹೃದಯಾಘಾತದಿಂದ ವರ ಸಾವು

ಬಾಗಲಕೋಟೆ: ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಸಮಾರಂಭ ಕೆಲ ನಿಮಿಷಗಳಲ್ಲೇ ಸೂತಕದ ಛಾಯೆ ಆವರಿಸಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತನನ್ನು ಕುಂಬಾರಹಳ್ಳ ಗ್ರಾಮದ ನಿವಾಸಿ, ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುನೆರ್ ಅವರ ಪುತ್ರ ಪ್ರವೀಣ ಕುರ್ನೆ ಎಂದು ಗುರುತಿಸಲಾಗಿದೆ.

ಲಾಡೆನ್ ಹತ್ಯೆ- ಸಿಂಧೂರ ಕಾರ್ಯಾಚರಣೆಗೆ ಸಾಮ್ಯತೆ

ನವದೆಹಲಿ: ಅಮೆರಿಕವು ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ನನ್ನು ಕೊಂದಿದ್ದಕ್ಕೂ ಹಾಗೂ ಪಹಲ್ಗಾಮ್ ಉಗ್ರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತ ಮಾಡಿದ ಅಪರೇಷನ್ ಸಿಂಧೂರ ಕಾರ್ಯಾಚರಣೆಗೂ ಬಹಳಷ್ಟು ಸಾಮ್ಯತೆಯಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧಿನಕರ್ ಹೇಳಿದರು. ಅಮೆರಿಕವು, 9/11 ದಾಳಿಯ ನಂತರ ಆ ಘಟನೆಯ ಮಾಸ್ ಟ್ರ್ ಮೈಂಡ್ ನನ್ನು ಹುಡುಕಿಕೊಂಡು ಹೋಗಿ ಕೊಂದ ರೀತಿಯಲ್ಲೇ, ಪಹಲ್ಗಾಮ್ ಘಟನೆಯ ನಂತರ ಭಾರತವು ಪಾಕಿಸ್ತಾನದೊಳಕ್ಕೆ ನುಗ್ಗಿ ಉಗ್ರರ ಅಡಗು ತಾಣ ನಾಶಮಾಡಿದೆ ಎಂದರು. ಜಗತ್ತಿಗೆ ತಿಳಿಯುವಂತೆ ಭಾರತವು … Read more

ಮಳೆ ಗಾಳಿಗೆ ನೆಲ ಕಚ್ಚಿದ ಮನೆ- ಕುಟುಂಬ ಕಂಗಾಲು

ತುರುವೇಕೆರೆ: ಕಳೆದ ಒಂದೆರೆಡು ದಿನಗಳಿಂದ ಬರುತ್ತಿರುವ ಮಳೆ ಗಾಳಿಗೆ ತಾಲೂಕಿನ ನಾಗೇಗೌಡನ ಬ್ಯಾಲ (ಎನ್ ಜಿ ಬ್ಯಾಲ) ಗ್ರಾಮದಲ್ಲಿ ಮನೆಯೊಂದು ನೆಲ ಕಚ್ಚಿರುವ ಘಟನೆ ನಡೆದಿದೆ. ನಾಗೇಗೌಡನ ಬ್ಯಾಲದ ಮುದ್ದಹನುಮಯ್ಯ ಎಂಬುವವರ ಮನೆ ಮಳೆ ಗಾಳಿಗೆ ಕುಸಿದು ಬಿದ್ದಿದೆ, ರಾತ್ರಿ ವೇಳೆ ಇದ್ದಕ್ಕಿದ್ದಂತೆ ಮಳೆ ಮತ್ತು ಸಣ್ಣ ಪ್ರಮಾಣದಲ್ಲಿ ಗಾಳಿ ಬಂದಿತು, ನೋಡ ನೋಡುತ್ತಿದ್ದಂತೆ ಮನೆಯ ಹೆಂಚು ದಿಢೀರನೆ ಕುಸಿದು ಬಿದ್ದವು, ಮನೆಯಲ್ಲಿದ್ದ ಧರ್ಮರಾಜು (45) ಎಂಬುವವರಿಗೆ ಬೆನ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಉಳಿದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ … Read more

ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯಾಧಿಕಾರಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯ ಶ್ರೀನಿವಾಸಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಬಳಿ ಇರುವ ಮರಗಳು ಕಟಾವು ಮಾಡಲು ಅನುಮತಿ ಕೋರಿದ್ದ ರೈತನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಉಪ ವಲಯ ಅರಣ್ಯಾಧಿಕಾರಿ ಹಾಗೂ ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಬೆಳಗ್ಗೆ ಚಿಂತಾಮಣಿ ನಗರದ ಕೋಲಾರ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಲ್ಲಿ ನಡೆದಿದೆ.ಲೋಕಾಯುಕ್ತ ಬಲೆಗೆ ಬಿದ್ದ ಉಪ ವಲಯ ಅರಣ್ಯಧಿಕಾರಿ ಧನಲಕ್ಷ್ಮೀ ಹಾಗೂ ವಾಹನ ಚಾಲಕ ಮಣಿಕಂಠ ಎಂದು ಗುರುತಿಸಲಾಗಿದೆ. ಚಿಂತಾಮಣಿ ತಾಲೂಕಿನ … Read more

ಧರ್ಮ ನೋಡಿ ಕೊಂದರೆ, ಕರ್ಮ ನೋಡಿ ಉಡಾಯಿಸ್ತೀವಿ

ಶ್ರೀನಗರ: ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ಅಮಾಯಕ ಜನರನ್ನು ಅವರ ಧರ್ಮ’ ಕೇಳುವ ಮೂಲಕ ಕೊಂದರು. ಅದರ ನಂತರ ಭಾರತಿಯ ಯೋಧರು ಭಯೋತ್ಪಾದಕರನ್ನು ಅವರ ಕರ್ಮಗಳನ್ನು ನೋಡಿ ಹೊಡೆದು ಹಾಕಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಅಪರೇಷನ್ ಸಿಂಧೂರ ಯಶಸ್ವಿ ನಂತರ ಜಮ್ಮುಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಸೇನಾ ಕಚೇರಿಯಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿ, ಉಗ್ರರು ಅಮಾಯಕರನ್ನು ಅವರ ‘ಧರ್ಮ’ ನೋಡಿ ಕೊಂದರು, ಇದು ಪಾಕಿಸ್ತಾನದ ಕರ್ಮ’ವಾಗಿತ್ತು. ನಾವು ಅವರ ಕರ್ಮ’ … Read more

ಕುಖ್ಯಾತ ಕಳ್ಳ ಅಮರೇಶ್ ಕಾಲಿಗೆ ಗುಂಡೇಟು

ಬಳ್ಳಾರಿ: ಹಲವು ಕಳ್ಳತನ, ಮರ್ಡರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಪಂಚನಾಮೆ ವೇಳೆ ಪೇದೆಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಆತನ ಮೇಲೆ ಫರಿಂಗ್ ಮಾಡಿದ ಘಟನೆ ಸಿರುಗುಪ್ಪ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿರುರುಪ್ಪ ಪೊಲೀಸರಿಂದ ಕುಖ್ಯಾತ ಕಳ್ಳ ಅಮರೇಶ್ ಮೋಡಿಕರ್ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಸಿರುಗುಪ್ಪ ಸಿಪಿಐ ಹನುಮಂತಪ್ಪ ಅವರಿಂದ ಆರೋಪಿ ಬಲಗಾಲಿಗೆ ಗುಂಡೇಟು. ಕಳ್ಳತನ ಪ್ತಕರಣದ ಮಹಜರ್ ಗೆ ಕರೆದುಕೊಂಡು ಹೋದಾಗ ಕಾನ್ಸಟೇಬಲ್ ಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು … Read more

ಹನ್ನೆರಡು ಜನ ವಂಚಕರ ಬಂಧನ

ಬೆಂಗಳೂರು: ಮನೆಯಿಂದ ಕೆಲಸ ಮಾಡುವ ಅವಕಾಶಗಳ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಗ್ಯಾಂಗ್ ನ ಭಾಗವಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಜನವರಿಯಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಗೃಹಿಣಿಯೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬಳಿಕ ಈ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯಿಂದ ಕೆಲಸ ಮಾಡುವ ಅವಕಾಶದ ನೆಪ ಹೇಳಿ ಐದು ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ … Read more

ಬಾಲಕಿಯ ಮೃತ ದೇಹ ಪತ್ತೆ

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯ ಸಮೀಪದಲ್ಲಿರುವ ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ, ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದ ಸ್ಥಿತಿಯಲ್ಲಿ ಬಾಲಕಿಯ ಮೃತ ದೇಹವೊಂದು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇ 11ರಂದು ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಗಳ ಗುಂಪು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಬೆನ್ನು ಮೂಳೆ ಮುರಿದು ಕುತ್ತಿಗೆ ತಿರುಚಿ ಕ್ರೂರವಾಗಿ ಕೊಲೆಗೈದಿದ್ದಾರೆ. ಘಟನೆ ನಡೆದು ಮೂರು ದಿನಗಳ ಬಳಿಕ ಶವ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ … Read more

ಗಾಂಜಾ ಮಾರಾಟ- ಇಬ್ಬರ ಬಂಧನ

ತುಮಕೂರು: ನಗರದ ಬಟವಾಡಿ ಕೆಳ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸ ಬಡಾವಣೆ ಠಾಣೆ ಪೊಲೀಸರು, 1.10 ಲಕ್ಷ ಮೌಲ್ಯದ 1 ಕೆ.ಜಿ 300ಗ್ರಾಂ ಗಾಂಜಾ ಸೊಪ್ಪು ಜಪ್ತಿ ಮಾಡಿದ್ದಾರೆ. ರಾಜೀವ್ಗಾಂಧಿ ನಗರದ ತೌಸ್ಪಾಷ, ಗುಬ್ಬಿ ಗೇಟ್ ನ ವಸೀಂ ಅಕ್ರಂ ಬಂಧಿತರು. ಇಬ್ಬರು ಪ್ರತಿ ಸೋಮವಾರ ಬಟವಾಡಿ ಬಳಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸುತ್ತಿದ್ದರು. ಅದನ್ನು ನಗರದ ವಿವಿಧಡೆ ಮಾರಾಟ ಮಾಡುತ್ತಿದ್ದರು. ಬ್ಯಾಗ್ ನಲ್ಲಿ ಗಾಂಜಾ ಸೊಪ್ಪು ಹಿಡಿದುಕೊಂಡು ನಿಂತಿದ್ದರು. ಖಚಿತ ಮಾಹಿತಿ … Read more

ಮೋಸ ಮಾಡುತ್ತಿದ್ದ 12 ಮಂದಿ ಬಂಧನ

ಬೆಂಗಳೂರು: ಸಾರ್ವಜನಿಕರಿಂದ ಫೋನ್ ಪೇ, ಗೂಗಲ್ ಪೇ ಹಾಗೂ ಬ್ಯಾಂಕ್ ಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ 12 ಮಂದಿ ಅಂತಾರಾಜ್ಯ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 400 ಮೊಬೈಲ್ ಸಿಮ್ಗಳು, 140 ಎಟಿಎಂ ಕಾರ್ಡ್ಗಳು, 17 ಚೆಕ್ ಪುಸ್ತಕಗಳು, 27 ಮೊಬೈಲ್ ಫೋನ್ ಗಳು, 22 ವಿವಿಧ ಬ್ಯಾಂಕ್ ಪಾಸ್ ಬುಕ್ ಗಳು, ಆದಾಯ ಮತ್ತು ಖರ್ಚು ವೆಚ್ಚಗಳನ್ನು ನಮೂದಿಸಿರುವ ಪುಸ್ತಕ ಮತ್ತು 15 ಸಾವಿರ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. … Read more