--ಇಲ್ಲಿ ಜಾಹೀರಾತು--

ಗಾಂಜಾ ಮಾರಾಟ- ಇಬ್ಬರ ಬಂಧನ

On: May 14, 2025 2:23 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ತುಮಕೂರು: ನಗರದ ಬಟವಾಡಿ ಕೆಳ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸ ಬಡಾವಣೆ ಠಾಣೆ ಪೊಲೀಸರು, 1.10 ಲಕ್ಷ ಮೌಲ್ಯದ 1 ಕೆ.ಜಿ 300ಗ್ರಾಂ ಗಾಂಜಾ ಸೊಪ್ಪು ಜಪ್ತಿ ಮಾಡಿದ್ದಾರೆ.
ರಾಜೀವ್ಗಾಂಧಿ ನಗರದ ತೌಸ್ಪಾಷ, ಗುಬ್ಬಿ ಗೇಟ್ ನ ವಸೀಂ ಅಕ್ರಂ ಬಂಧಿತರು. ಇಬ್ಬರು ಪ್ರತಿ ಸೋಮವಾರ ಬಟವಾಡಿ ಬಳಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸುತ್ತಿದ್ದರು. ಅದನ್ನು ನಗರದ ವಿವಿಧಡೆ ಮಾರಾಟ ಮಾಡುತ್ತಿದ್ದರು. ಬ್ಯಾಗ್ ನಲ್ಲಿ ಗಾಂಜಾ ಸೊಪ್ಪು ಹಿಡಿದುಕೊಂಡು ನಿಂತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now