ಬೆಂಗಳೂರು: ಕೊಲೆ ಮಾಡಲು ಬಂದ ರೌಡಿಶೀಟರ್ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುನೀತ್ (25) ಮೃತ ರೌಡಿಶೀಟರ್ ಹಾಗೂ ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಬಂಧಿತ ಆರೋಪಿಗಳು.
ದಮೃತ ಪುನೀತ್ ರೌಡಿಶೀಟರ್ ಆಗಿದ್ದು, ಆರೋಪಿ ಮಹೇಶ್ ಬಳಿ 40 ಸಾವಿರಕ್ಕೆ ಮಾತನಾಡಿ ಬೈಕ್ವೊಂದನ್ನು ಖರೀದಿಸಿದ್ದ ಆದರೆ ಹಣ ನೀಡದೆ ಸತಾಯಿಸುತ್ತಿದ್ದ. ಅಲ್ಲದೇ ಹಣ ಕೇಳಿದ ಮಹೇಶ್ಗೆ ಮಗಳನ್ನು ಅಪಹರಿಸುವ ಬೆದರಿಕೆ ಹಾಕಿದ್ದ. ಇದರಿಂದ ಇಬ್ಬರ ಮಧ್ಯೆ ವೈಮನಸ್ಸು ಆರಂಭವಾಗಿದ್ದು, ಮಹೇಶ್ ರಾಜಿ ಸಂಧಾನಕ್ಕೂ ಸಿದ್ಧನಿರಲಿಲ್ಲ. ಮೃತ ಪುನೀತ್ ಜೂನ್ 10ರಂದು ತನ್ನ ಸ್ನೇಹಿತ ಅರ್ಬಾಜ್ ಜೊತೆ ಮಹೇಶ್ ನ ಮನೆ ಬಳಿ ಬಂದು ಗಲಾಟೆ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಮಹೇಶ್, ಪುನೀತ್ ಕೈಯಲ್ಲಿದ್ದ ಮಾರಕಾಸ್ತ್ರ ಕಸಿದುಕೊಂಡು ಮನಬಂದಂತೆ ಥಳಿಸಿದ್ದಾನೆ. ಅರ್ಬಾಜ್ ಸ್ಥಳದಿಂದ ಓಟ ಕಿತ್ತಿದ್ದು, ಮಹೇಶ್ ಮತ್ತವನ ಸ್ನೇಹಿತರು ಪುನೀತ್ ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿಶೀಟರ್ ಕೊಲೆ- ಆರೋಪಿಗಳ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು