ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿತ್ತು.ಅಲ್ಲದೆ ಇದಕ್ಕೆ ಕನ್ನಡಿಗರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಇದೀಗ ವಿಪರ್ಯಾಸ ಅಂದರೆ ಕಾಲೇಜು ಒಂದರಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಉಪನ್ಯಾಸಕರು ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಆರ್ವಿ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕನ್ನಡದಲ್ಲಿ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದ, ಅದಕ್ಕೆ ಉಪನ್ಯಾಸಕ ಕನ್ನಡದಲ್ಲಿ ಉತ್ತರಿಸಿದ್ದರು, ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ಓರ್ವ ವಿದ್ಯಾರ್ಥಿ ದೂರು ನೀಡಿದ್ದಾನೆ, ಉಪನ್ಯಾಸಕ ರಾಜಿನಾಮೆಗೆ ಕಾಲೇಜು ಆಡಳಿತ ಮಂಡಳಿ ಆಗ್ರಹಿಸಿದೆ.
ರಾಜಿನಾಮೆ ಕೊಡಲು ನಿರಾಕರಿಸಿದಕ್ಕೆ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ, ಉಪನ್ಯಾಸಕನ ಪುತ್ರಿ ಅದೇ ಕಾಲೇಜಿನ ಬೇರೆ ಬ್ರ್ಯಾಂಚ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗಳ ಟಿಸಿ ಹಾಗು ದಾಖಲೆಗಳನ್ನು ಕೊಡಲ್ಲ ಅಂತ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ.ಮಗಳ ಭವಿಷ್ಯ ಮತ್ತು ಒತ್ತಡಕ್ಕೆ ಮಣಿದು ಉಪನ್ಯಾಸಕ ರಾಜಿನಾಮೆ ನೀಡಿದ್ದಾರೆ. ಕನ್ನಡ ಮಾತಾಡಿದಕ್ಕೆ ಹೀಗೆಲ್ಲ ಆಯ್ತು ಅಂತ ವೀಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ಕೆಲಸವೇ ಹೋಯ್ತು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು