ಮಹಿಳೆ ಮೇಲೆ ಹಲ್ಲೆ ಕೃತ್ಯ ಸಹಿಸಲ್ಲ: ಪರಂ

ಬೆಂಗಳೂರು: ಆನೇಕಲ್ ನ ಮೈಲಸಂದ್ರದಲ್ಲಿ ಪುಂಡರ ಗುಂಪೊಂದು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡಿದ್ದು, ಇಂತಹ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಗಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿಯೇ ಪೊಲೀಸ್ ಇಲಾಖೆ ಇದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಸಮಾಜದಲ್ಲಿ ಇಂತಹ ಕೃತ್ಯಗಳನ್ನು ತೀವ್ರವಾಗಿ ಪರಿಗಣಿಸಲಾಗುತ್ತದೆ ಎಂದರು. ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ಪ್ರಕರಣದಲ್ಲಿ ಪೊಲೀಸರ ವೈಫಲ್ಯಗಳಿವೆ ಎಂಬ ವರದಿಯ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ … Read more

ಟ್ಯಾಕ್ಸಿ ಬೈಕ್ ಸೇವೆ ರದ್ದು- ಪ್ರತಿಭಟನಾಕಾರರ ಬಂಧನ

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸುವ ಬದಲು ಸೂಕ್ತ ನಿಯಮ ರೂಪಿಸಬೇಕೆಂದು ಒತ್ತಾಯಿಸಿ ವಿಧಾನಸೌಧದ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದ 11 ಮಂದಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಧಾನಸೌಧದ ಮುಂದೆ ಯಾವುದೇ ಪ್ರತಿಭಟನೆ ನಡೆಸುವುದು ಹಾಗೂ ಗುಂಪು ಸೇರುವುದು ಕಾನೂನುಬಾಹಿರ. ಹೀಗಿದ್ದರೂ ಯಾವುದೇ ಮಾಹಿತಿ ನೀಡದೆ ಶಿವಮೊಗ್ಗ, ಮೈಸೂರು ಹಾಗೂ ಹಾಸನ ಸೇರಿದಂತೆ ವಿವಿಧ ಕಡೆಗಳಿಂದ ಬೈಕ್ ಟ್ಯಾಕ್ಸಿ ಸವಾರರು ಜೂನ್ 21ರಂದು ಬಂದು ಗುಂಪುಗೂಡಿ ಸರ್ಕಾರದ ವಿರುದ್ಧ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು.ಈ ಸಂಬಂಧ … Read more

ಅಪರಿಚಿತ ಶವ ಪತ್ತೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿ ಚೀರನಹಳ್ಳಿ ಗ್ರಾಮದಲ್ಲಿರುವ ಹೇಮಾವತಿ ನಾಲೆಯ ಸೇತುವೆ ಬಳಿ ಬೇಲಿಯಲ್ಲಿ ಜೂನ್ 19 ರಂದು ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತನು 169 ಸೆಂ.ಮೀ. ಎತ್ತರವಿದ್ದು, ದೇಹವೆಲ್ಲ ಕೊಳೆತು ಚರ್ಮ ಸುಲಿದುಕೊಂಡು ಒಳಮಾಂಸ ಕಾಣಿಸುತ್ತಿದೆ. ಮೃತ ದೇಹದ ಮೇಲೆ ಪಿಂಕ್ ಬಣ್ಣದ ಟೀ-ಷರ್ಟ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.08131- 246522, 222210, 0816- … Read more

ಜಿಂಕೆಯನ್ನು ಬೇಟೆಯಾಡಿದ ಚಿರತೆ

ಮೈಸೂರು: ಪ್ರವಾಸಿಗರ ಮುಂದೆ ಚಿರತೆ ಜಿಂಕೆಯನ್ನು ಬೇಟೆಯಾಡಿದೆ. ಮಿಂಚಿನ ವೇಗದಲ್ಲಿ ಬಂದು ಜಿಂಕೆ ಮೇಲೆ ಚಿರತೆ ದಾಳಿ ಮಾಡಿದೆ. ಭರ್ಜರಿ ಬೇಟೆಯಾಡಿ ಚಿರತೆಯನ್ನು ಎಳೆದೊಯ್ದ ಘಟನೆ ಕಬಿನಿ ಹಿನ್ನೀರಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಕನಕೋಟೆ ಸಾರಿ ಕೇಂದ್ರದಿಂದ ಅಂತರಸಂತೆ ವಲಯದಲ್ಲಿ ಚಿರತೆ ಜಿಂಕೆಯನ್ನು ಬೇಟೆಯಾಡಿತು. ಸಾರಿಗೆ ಚಿರತೆ ಮುಂದೆ ಜಿಂಕೆಯನ್ನು ಬೇಟೆಯಾಡಿತು. ಬೇಟೆ ದೃಶ್ಯವನ್ನು ಪ್ರವಾಸಿಗರು ಕಣ್ತಂಬಿಕೊಂಡರು. ಪ್ರವಾಸಿಗರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇರಾನ್ ನಲ್ಲಿ ಸಿಲುಕಿದ್ದ 16 ಜನ ಕನ್ನಡಿಗರು ತಾಯ್ನಾಡಿಗೆ

ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯ ಇರಾನ್ ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸರ್ಕಾರ ಸಿಂಧು ಕಾರ್ಯಾಚರಣೆ ಪ್ರಾರಂಭಿಸಿತು, ಇದೀಗ ಇರಾನ್ ಅಲ್ಲಿ ಸಿಲುಕಿದ್ದ 16 ಜನ ಕನ್ನಡಿಗರು ಶನಿವಾರ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಇರಾನ್ ಅಲ್ಲಿ ಸಿಲುಕಿದ್ದ ಕನ್ನಡಿಗರು ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. 16 ಜನ ಕನ್ನಡಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 16 ಜನ ಕನ್ನಡಿಗರು ಸುರಕ್ಷಿತವಾಗಿ … Read more

ಮತ್ತೆ ಕ್ಯಾತೆ ತೆಗೆದ ಮಹಾರಾಷ್ಟ್ರ

ಬೆಳಗಾವಿ: ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗಲೇ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ಆರಂಭಿಸಿದೆ. ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿ ಪುನರ್ ರಚನೆ ಮಾಡಿ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಡಿಸಿಎಂ ಏಕನಾಥ ಶಿಂಧೆ, ಅಜಿತ್ ಪವಾರ್, ಎನ್ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವ್ಹಾಣ್, ಬಿಜೆಪಿ ಸಂಸದ ನಾರಾಯಣ್ ರಾಣೆ ಸೇರಿ 18 ಜನ ಸಮಿತಿ ಸದಸ್ಯರು ಸಮಿತಿಯಲ್ಲಿದ್ದಾರೆ. ಈ ಮೂಲಕ … Read more

ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ದಾಳಿ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ದಾಳಿ ವೇಳೆ ಚಾಕು, ಕತ್ತರಿ, ಸಿಗರೇಟು ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್ ಪೂರೈಸುತ್ತಿದ್ದ ಕಾರಾಗಹ ಆಸ್ಪತ್ರೆಯ ಇಬ್ಬರು ಆಪ್ತ ಸಮಾಲೋಚಕರನ್ನು ಕಳೆದ ವಾರ ಬಂಧಿಸಲಾಗಿತ್ತು. ಹೊರ ಗುತ್ತಿಗೆ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದ ನವ್ಯಶ್ರೀ (33) ಮತ್ತು ಸೃಜನ್ (33) … Read more

ಲಂಚ ಪಡೆಯುವಾಗ ಇಂಜಿನಿಯರ್ ಲಾಕ್

ಬೆಂಗಳೂರು: ಬಿಬಿಎಂಪಿಯ ಹೆಸರು ಗ್ರೇಟರ್ ಬೆಂಗಳೂರು ಅಂತ ಬದಲಾಗಿದೆ. ಅದರ ಜೊತೆಗೆ ಬಿಬಿಎಂಪಿಯ ಅಧಿಕಾರಿಗಳೂ ಕೂಡಾ ಗ್ರೇಟರ್ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬರೋಬ್ಬರಿ 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ರೆಡ್ ಹ್ಯಾಅಂಡ್ ಆಗಿ ಲಾಕ್ ಆಗಿದ್ದಾರೆ. ಲೋಕಾಯುಕ್ತರ ಬಲೆಗೆ ಇಂಜಿನಿಯರ್ ಬಿದ್ದಿದ್ದಾರೆ. ಸಿ.ವಿ.ರಾಮನ್ ನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿ.ಯರಪ್ಪ ರೆಡ್ಡಿ ಲೋಕಾಯುಕ್ತ ಬಲೆಗೆಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.ಗುತ್ತಿಗೆದಾರರ ಕಡತ ಫಾರ್ವರ್ಡ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ … Read more

ಕುಸಿದು ಬಿದ್ದು ಕಕ್ಷಿದಾರ ಸಾವು

ಗುಬ್ಬಿ: ಜಮೀನಿನ ವ್ಯಾಜ್ಯದ ಸಂಬಂಧವಾಗಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಕಕ್ಷಿದಾರರೊಬ್ಬರು ನ್ಯಾಯಾಲಯದ ಆವರಣದಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ಚೇಳೂರು ಹೋಬಳಿ ಕಚ್ಚೇನಹಳ್ಳಿಯ ರಮೇಶ್ (55) ಎಂದು ಗುರ್ತಿಸಲಾಗಿದೆ. ಚೇಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೃತರು ನ್ಯಾಯಾಲಯದಲ್ಲಿ ವಿಚಾರಣೆ ಇದ್ದ ಕಾರಣ ಬೆಳಗ್ಗೆ ಮನೆಯಿಂದ ಬಂದು ನ್ಯಾಯಾಲಯದ ಆವರಣದಲ್ಲಿ ಕುಳಿತಿದ್ದರು ಎನ್ನಲಾಗಿದೆ. ನ್ಯಾಯಾಲಯದ ಕಲಾಪಗಳು ಪ್ರಾರಂಭಗೊಂಡಾಗ ಒಳಗೆ ಹೋಗುವ ಸಂದರ್ಭಲ್ಲಿ ಕುಸಿದು ಬಿದ್ದಿದ್ದಾರೆ, ತಕ್ಷಣ ಸಮೀಪದಲ್ಲಿದ್ದ ಕಕ್ಷಿದಾರರು ಹಾಗೂ ವಕೀಲರು ಆಗಮಿಸಿ ಗುಬ್ಬಿ ಸಾರ್ವಜನಿಕ … Read more

ಡ್ರಗ್ಸ್ ಪೆಡ್ಲಿಂಗ್- ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ ನಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯನಾಗಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಚಿಕ್ವುಮಾ ಬಂಧಿತ ಆರೋಪಿ. ಆವಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ಮನೆ ಮೇಲೆ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬರೋಬ್ಬರಿ 1.2 ಕೋಟಿ ರೂಪಾಯಿ ಮೌಲ್ಯದ 600 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಕಾಲೇಜು ವಿದ್ಯಾರ್ಥಿಗಳಿಗೆ, ಪಾರ್ಟಿ ಗಳಿಗೆ ಅವುಗಳನ್ನು ಮಾರುತ್ತಿದ್ದ ಎಂದು ತಿಳಿದುಬಂದಿದೆ.