
ಕೊರಟಗೆರೆ: ಗೊಬ್ಬರ ತುಂಬಿದ್ದ ಲಾರಿ ಬ್ರೇಕ್ ಫೇಲ್ಯೂರ್ ಆಗಿ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಮಂಗಳವಾರ ಬೆ.12ಗಂಟೆ ಸುಮಾರಿಗೆ ಕೋಳಾಲ ಪೊಲೀಸ್ ಠಾಣೆ ರಸ್ತೆ ಕಡೆಯಿಂದ ಬಂದ ಗೊಬ್ಬರದ ಲಾರಿ ಬ್ರೇಕ್ ಫೇಲ್ಯೂರ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೈರವೇಶ್ವರ ಕಾಂಡಿಮೆಂಟ್ಸ್ಗೆ ನುಗ್ಗಿದ್ದು, ಈ ದುರಂತದಲ್ಲಿ ಬೇಕರಿ ಮುಂದೆಯಿದ್ದ ರಂಗಶಾಮಯ್ಯ (70), ಬೈಲಪ್ಪ (65), ಜಯಣ್ಣ (55) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಾಜಿ ಜಿಪಂ ಸದಸ್ಯೆಸಿದ್ದಗಂಗಮ್ಮ ಪ್ರಜ್ಞಾಹೀನಗೊಂಡಿದ್ದು, ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಸಿಪಿಐ ಅನಿಲ್, ಕೋಳಾಲ ಪಿಎಸ್ಐ ಅಭಿಷೇಕ್, ಯೋಗೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕ್ ಫೇಲ್ಯೂರ್- ಬೇಕರಿಗೆ ನುಗ್ಗಿದ ಗೊಬ್ಬರದ ಲಾರಿ ದುರಂತದಲ್ಲಿ ಮೂವರು ಸಾವು, ಮೂವರಿಗೆ ಗಾಯ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


