--ಇಲ್ಲಿ ಜಾಹೀರಾತು--

ರೂಪಾಯಿ ಮೌಲ್ಯ ಕುಸಿತ

On: March 12, 2026 2:42 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ:
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದ ಪರಿಣಾಮ ಕಚ್ಚಾತೈಲ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ಡಾಲರ್‌ಗೆ ಬೇಡಿಕೆ ಹೆಚ್ಚಳದಿಂದ ಗುರುವಾರ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ರಾತ್ರಿಯಿಡೀ ಏರುತ್ತಲೇ ಇದ್ದುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ 35 ಪೈಸೆ ಕುಸಿದು ದಿನದ ಕನಿಷ್ಠ ಮಟ್ಟ 92.36ಕ್ಕೆ ತಲುಪಿತು. ದೇಶೀಯ ಷೇರು ಮಾರುಕಟ್ಟೆ ಕುಸಿತದಿಂದ ಡಾಲರ್ ಮತ್ತಷ್ಟು ಪ್ರಬಲವಾಗುತ್ತಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಿಂತೆಗೆತ ಹೆಚ್ಚುತ್ತಿರುವುದು ವಹಿವಾಟು ದುರ್ಬಲಗೊಳ್ಳಲು ಕಾರಣವಾಗಿದೆ.
ಅಂತರಬ್ಯಾAಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯವು 92.25ರಿಂದ ಆರಂಭವಾಯಿತು. ಬಳಿಕ ಕುಸಿತ ಕಂಡು, ಯುಎಸ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠವಾದ 92.36ಕ್ಕೆ ಇಳಿಯಿತು. ಈ ಹಿಂದಿನ ಅಂದರೆ ಮಾರ್ಚ್ 9ರಂದು ಸಾರ್ವಕಾಲಿಕ ಕನಿಷ್ಠವಾಗಿದ್ದ 92.35 ದರವನ್ನು ಮೀರಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now