
ಬೆಂಗಳೂರು: ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದ ಆರು ಮಂದಿ ಅಂತರ ರಾಜ್ಯಚೋರರನ್ನು ಬಂಧಿಸಿರುವ ಕಾಟನ್ ಪೇಟೆ ಠಾಣೆ ಪೊಲೀಸರು 42 ಲಕ್ಷ ವೌಲ್ಯದ 53.5 ಕೆ.ಜಿ ಗಾಂಜಾ, 9ಮೊಬೈಲ್, 10 ಸಿಮ್ ಕಾರ್ಡ್, 1ಲ್ಯಾಪ್ ಟಾಪ್, 1 ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ದೀಪಕ್ ಕುಮಾರ್(22), ಅಮರನಾಥ್(61), ರಾಜಸ್ಥಾನದ ಶಂಕರ್ ಲಾಲ್(36) ಮತ್ತು ಒಡಿಸ್ಸಾದ ನೂರುದ್ದೀನ್ ದುಲೈ(38), ಜಾರ್ಖಂಡ್ ನಿವಾಸಿಗಳಾದ ಬಸಂತ್ ಕುಮಾರ್(35) ಮತ್ತು ಅಜಿತ್ ಸಿಂಗ್(43) ಬಂ ತ ಆರೋಪಿಗಳು.ಕಳೆದ ಜು.12 ರಂದು ಠಾಣೆ ಸರಹದ್ದಿನ ಪಶುವೈದ್ಯ ಆಸ್ಪತ್ರೆಯ ಹಿಂಭಾಗದಲ್ಲಿ ಗೂಡ್ಸ್ ಆಟೋವೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಕಾರ್ಯಾಚರಣೆ ಕೈಗೊಂಡ ಕಾಟನ್ ಪೇಟೆ ಪೊಲೀಸರು ರಾಜಸ್ಥಾನ ಮತ್ತು ಒಡಿಸ್ಸಾ ಮೂಲದ ಇಬ್ಬರನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದರು.
ಗೂಡ್ಸ್ ಆಟೋವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ 53.5 ಕೆ.ಜಿ ಗಾಂಜಾ ಪತ್ತೆಯಾಗಿತ್ತು ನಂತರ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ, ಗಾಂಜಾವನ್ನು ಆಂದ್ರಪ್ರದೇಶದ ಶಾಖಪಟ್ಟಣಂನಿಂದ ಬಸ್ ಮತ್ತು ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ತರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ದೆಹಲಿ, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಇತರೆ ನಾಲ್ವರು ಸಹಚರರ ಜೊತೆ ಸೇರಿಕೊಂಡು, ಸಾಗಾಣೆ ಮತ್ತು ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ.
ಗಾಂಜಾ ಕಳ್ಳ ಸಾಗಣೆ- ಆರು ಮಂದಿ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


