--ಇಲ್ಲಿ ಜಾಹೀರಾತು--

ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ ಕಾರ್ಯಾಚರಣೆಯಲ್ಲಿ ಕಳೇಬರ ಸಿಕ್ಕಿಲ್ಲ

On: July 29, 2025 2:55 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಮಿನಿ ಹಿಟಾಚಿ ಸತತ ಕಾರ್ಯಾಚರಣೆ ನಡೆಸಿದರೂ ಕಳೇಬರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
12 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು.ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು. ಕಡೆಗೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು.ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಈವರೆಗೆ ನಿಂತಿಲ್ಲ. ನಿರಂತರ ಕಾರ್ಯಾಚರಣೆಯಿಂದ ಹೊಂಡದ ರೂಪವಾಗಿದೆ. ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಜತೆಗೆ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಕಾರ್ಯಾಚರಣೆಗೆ ಇದೀಗ ಶ್ವಾನ ದಳದ ಎಂಟ್ರಿಯಾಗಿದೆ. ಕಾರ್ಮಿಕರು ಹಾಗೂ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಸಿಗದ ಕಳೇಬರಹ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now